Breaking NewsLatestಆರೋಗ್ಯಜಿಲ್ಲಾ ಸುದ್ದಿಮೆಟ್ರೋರಾಜ್ಯರಾಷ್ಟ್ರೀಯಸುದ್ದಿ
ದೇಶದಲ್ಲಿ 175.46 ಕೋಟಿ ಕೋವಿಡ್ ಲಸಿಕೆ, 98.33ರಷ್ಟು ಚೇತರಿಕೆ ದರ

ನವದೆಹಲಿ: ರಾಷ್ಟ್ರದ್ಯಂತ ಲಸಿಕೆ ಅಭಿಯಾನದಡಿ ಈವರೆಗೆ ದೇಶದಲ್ಲಿ 175 ಕೋಟಿ 46ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಡೋಸ್ ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದೇ ಅವಧಿಯಲ್ಲಿ ಒಟ್ಟು 16 ಸಾವಿರದ 51 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ. ಭಾರತದ ಸಕ್ರಿಯ ಕ್ಯಾಸೆಲೋಡ್ ಪ್ರಸ್ತುತ ಎರಡು ಲಕ್ಷದ ಎರಡು ಸಾವಿರ ದಷ್ಟಿದೆ. ಚೇತರಿಕೆ ಪ್ರಮಾಣ ಪ್ರಸ್ತುತ ಶೇ.98.33ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 37 ಸಾವಿರದ 901 ಜನರು ಚೇತರಿಸಿಕೊಂಡಿದ್ದಾರೆ. ಒಟ್ಟು ಚೇತರಿಸಿಕೊಂಡವರು 4 ಕೋಟಿ 21 ಲಕ್ಷವನ್ನು ಮುಟ್ಟಿದ್ದಾರೆ.
ವಾರದ ಪಾಸಿಟಿವಿಟಿ ದರವು ಪ್ರಸ್ತುತ ಶೇ.2.12ರಷ್ಟಿದ್ದರೆ, ದೈನಂದಿನ ಪಾಸಿಟಿವ್ ದರ ಶೇ.1.93ರಷ್ಟಿದೆ. ದೇಶದಲ್ಲಿ ಇದುವರೆಗೆ 76ಕೋಟಿಗೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.
