Breaking NewsLatestಆರೋಗ್ಯರಾಜ್ಯರಾಷ್ಟ್ರೀಯವಿದೇಶಸುದ್ದಿ

ಅಮೆರಿಕದಲ್ಲಿ ದಿನಕ್ಕೆ 10 ಲಕ್ಷ ಹೊಸ ಪ್ರಕರಣ ದಾಖಲು

ವಾಷಿಂಗ್ಟನ್: ಅಮೆರಿಕಾದಲ್ಲಿ  ಒಮಿಕ್ರಾನ್ ಸೋಂಕಿನ ನಂತರ ದೇಶದಲ್ಲಿ ಕೋವಿಡ್  ಸೊಂಕು ಪ್ರಕರಣಗಳು  ಮತ್ತು ಸಾವಿನ ಸಂಖ್ಯೆ ಎರಡೂ ಸಹ  ವಿಪರೀತ ಹೆಚ್ಚಾಗಿದೆ. ದಿನವೊಂದಕ್ಕೆ 10 ಲಕ್ಷ ಹೊಸ  ಹೊಸ ಕೋವಿಡ್ ಸೋಂಕು ಪ್ರಕರಣಗಳು  ವರದಿ ಆಗುತ್ತಿದ್ದು, ಸಾವಿನ ಸಂಖ್ಯೆ ಸಹ ಗಣನೀಯವಾಗಿ ಏರಿಕೆ ಆಗುತ್ತಿರುವುದು ಆತಂಕಕಾರಿಯಾಗಿದೆ.

ಪ್ರತಿನಿತ್ಯ 1, 500 ರಿಂದ 2 ಸಾವಿರ ಜನರು ಕೋವಿಡ್ ಕಾರಣದಿಂದ  ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ  ಎಂದು ಹೊಸ ಅಂಕಿ ಅಂಶಗಳು ಹೇಳುತ್ತಿವೆ.

ಜನವರಿ 10 ರಿಂದ 16 ರವರೆಗಿನ ವಾರದಲ್ಲಿ ದೇಶದಲ್ಲಿ  5.4 ಮಿಲಿಯನ್ ಹೊಸ ಕೋವಿಡ್ ಪ್ರಕರಣ  ದಾಖಲಿಸಿದೆ, ಇದು ದೇಶದಲ್ಲಿ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ದಾಖಲೆಯ ಹೆಚ್ಚಿನ ಸಾಪ್ತಾಹಿಕ ಪ್ರಕರಣವಾಗಿದೆ ಎಂದು  ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಹೊಸ ಅಂಕಿ-ಅಂಶಗಳು ತಿಳಿಸಿವೆ.

ಹೆಚ್ಚು ಸಾಂಕ್ರಾಮಿಕ ಒಮಿಕ್ರಾನ್ ರೂಪಾಂತರಿ ಯ ಕಾರಣ  ಡಿಸೆಂಬರ್ ನಲ್ಲಿ ಕೋವಿಡ್  ಉಲ್ಬಣಹೊಂಡಿದೆ.

ಜಗತ್ತಿನಲ್ಲಿ ಕೋವಿಡ್ ಕಾರಣದಿಂದ ಅತಿ ಹೆಚ್ಚು ತೊಂದರೆಗೆ ಮತ್ತು ಸಾವು-ನೋವಿಗೆ ತುತ್ತಾಗಿರುವ ರಾಷ್ಟ್ರಗಳ ಸಾಲಿನಲ್ಲಿ  ಅಮೆರಿಕವೇ ಮೊದಲ ಸ್ಥಾನದಲ್ಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button