Breaking NewsLatestರಾಷ್ಟ್ರೀಯವಾಣಿಜ್ಯಸುದ್ದಿ
ಗ್ರಾಹಕ ಜಾಗೃತಿಗಾಗಿ ಸಾರಥಿ ಮೊಬೈಲ್ ಅಪ್ಲಿಕೇಶನ್

ನವದೆಹಲಿ: ಷೇರು ಮಾರುಕಟ್ಟೆ ಮತ್ತು ಬಂಡವಾಳ ಮಾರುಕಟ್ಟೆಯಲ್ಲಿ ಹಣ ಹೂಡುವವರಲ್ಲಿ ಹೆಚ್ಚಿನ ತಿಳಿವಳಿಕೆ, ಜಾಗೃತಿ ಮೂಡಿಸಲು ಸೆಬಿ ಸಾರಥಿ ಎಂಬ ಗ್ರಾಹಕ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಸಿದ್ದಪಡಿಸಿದೆ. ಇದರ ಉದ್ದೇಶ ಹಣಕಾಸು ಮಾರುಕಟ್ಟೆಯಲ್ಲಿ , ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವವರ ಹಿತ ಕಾಪಾಡುವುದೇ ಆಗಿದೆ.
ಬ್ಯಾಂಕುಗಳಲ್ಲಿ ಬಡ್ಡಿ ಕಡಿಮೆಯಾದ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಬಂಡವಾಳಗಾರರನ್ನು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿರುವುದು ದಿನ ಕಳೆದಂತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಬಿ ಗ್ರಾಹಕರ ಹಿತ ಗಮದಲ್ಲಿಟ್ಟುಕೊಂಡು ಮೊಬೈಲ್ ಅಪ್ಲಿಕೇಶನ್ ರೂಪಿಸಿದೆ.
