ಮನೆಯಲ್ಲಿ ಒಡೆದ ಕನ್ನಡಿ ಇಟ್ಟುಕೊಂಡಿದ್ರೆ ಎದುರಾಗುತ್ತಾ ಸಮಸ್ಯೆ?

ಸಾಮಾನ್ಯವಾಗಿ ನಾವು ಮನೆಯನ್ನು ಅಲಂಕರಿಸುವ ದೃಷ್ಟಿಯಿಂದ ಕೆಲವು ವಸ್ತುಗಳನ್ನು ತರುತ್ತೇವೆ. ಇನ್ನೂ ಹಲವು ವೇಳೆ ಕೆಲವು ವಸ್ತುಗಳನ್ನು ನಾವು ನಿತ್ಯ ಬಳಸುತ್ತೇವೆ. ಅದರಲ್ಲೂ ಕನ್ನಡಿಯನ್ನು ಎಲ್ಲರೂ ಪ್ರತಿನಿತ್ಯ ಬಳಸುತ್ತಾರೆ. ಕನ್ನಡಿ ಇಲ್ಲದ ಮನೆಗಳೇ ಇಲ್ಲವೇನೋ..? ಆಹಾರಕ್ಕೆ ನಾವು ಎಷ್ಟು ಪ್ರಾಮುಖ್ಯತೆ ನೀಡುತ್ತಿವೋ ಅಷ್ಟೆ ಪ್ರಾಮುಖ್ಯತೆಯನ್ನ ನಾವು ಅಲಂಕಾರಕ್ಕೆ ನೀಡುತ್ತೇವೆ.
ಮನುಷ್ಯರಷ್ಟೇ ಅಲ್ಲ, ಆನೆಗಳು, ಕೋತಿಗಳಂತಹ ಪ್ರಾಣಿಗಳು ಸಹಿತ ತಮ್ಮ ಪ್ರತಿಬಿಂಬವನ್ನು ನೀರಿನಲ್ಲಿ ನೋಡಿಕೊಂಡು ಮೈಮರೆಯುತ್ತವೆ. ಹೆಣ್ಣು ಮಕ್ಕಳಂತೂ ಕನ್ನಡಿ ಪ್ರಿಯರು. ಪ್ರತಿದಿನ ಒಂದು ಬಾರಿಯಾದರು ಕನ್ನಡಿಯನ್ನು ನೋಡದಿದ್ದರೆ ಮನಸ್ಸಿಗೆ ಹೇಳಲಾಗದ ತಳಮಳ ಉಂಟಾಗುತ್ತದೆ ಹಾಗೂ ಜೀವನದಲ್ಲಿ ಏನನ್ನೋ ಕಳೆದುಕೊಂಡತ್ತಾಗಿರುತ್ತದೆ.
ಆದರಿಂದ ಹೆಣ್ಣು ಮಕ್ಕಳನ್ನು ದರ್ಪಣ ಸುಂದರಿಯರೆಂದೂ ಸಹ ಕರೆಯುತ್ತಾರೆ. ವಾಸ್ತು ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಒಡೆದ ಕನ್ನಡಿಯನ್ನು ಎಂದಿಗೂ ಬಳಸಬಾರದು. ಅದನ್ನು ಬಳಸುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡುವುದರಿಂದ ಹಣಕಾಸಿನ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಒಡೆದ ಕನ್ನಡಿಯೂ ನಕಾರಾತ್ಮಕ ಶಕ್ತಿಯ ಮೂಲವಾಗಿದೆ, ಮನಸ್ಸಿನ ನೆಮ್ಮದಿಯನ್ನು ಹದಗೆಡಿಸುತ್ತದೆ, ಆದ್ದರಿಂದ ಒಡೆದ ಕನ್ನಡಿಯನ್ನು ಬಳಸಬಾರದು. ಹೀಗಾಗಿ ಒಡೆದ ಕನ್ನಡಿ ಮನೆಯಲ್ಲಿದ್ರೆ ಈಗಲೇ ಬಿಸಾಡಿಬಿಡಿ.




