ಆಹಾರಲೈಫ್ ಸ್ಟೈಲ್
ತೂಕ ಇಳಿಸಿಕೊಳ್ಳಲು ರಾತ್ರಿ ವೇಳೆ ಹೀಗೆ ಮಾಡಿ

ಪವಿತ್ರಾ ಶೆಟ್ಟಿ
ತೂಕ ಇಳಿಸಬೇಕೆಂದು ಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ದಿನದ ವೇಳಾಪಟ್ಟಿಯ ಮೇಲೆ ಗಮನಹರಿಸುವುದು ಒಳ್ಳೆಯದು. ಸಂಜೆ ಏಳರ ಬಳಿಕ ಆಹಾರ ಸೇವಿಸುವುದನ್ನು ಹಾಗೂ ಜ್ಯೂಸ್ ಮೊದಲಾದ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ.
ರಾತ್ರಿ ಮಲಗುವ ಮುನ್ನ ಚಹಾ ಅಥವಾ ಕಾಫಿ ಕುಡಿಯದಿರಿ. ಅದರಲ್ಲೂ ಸಕ್ಕರೆ ಬೆರೆಸಿದ ಚಹಾ-ಕಾಫಿ ಗೆ ಗುಡ್ ಬೈ ಹೇಳಿ. ಇದು ನಿದ್ರೆಯ ಮೇಲೆ ಮಾತ್ರವಲ್ಲ ಜೀರ್ಣಕ್ರಿಯೆಯಮೇಲೆಯೂ ದುಷ್ಪರಿಣಾಮ ಬೀರುತ್ತದೆ.
ಊಟದ ನಂತರ ವ್ಯಾಯಾಮ ಮಾಡದಿರಿ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರವನ್ನು ರಾತ್ರಿ ವೇಳೆ ಸೇವಿಸದಿರಿ. ಹಣ್ಣು ಮತ್ತು ತಾಜಾ ತರಕಾರಿಗಳನ್ನು ಮಾತ್ರ ರಾತ್ರಿ ಸೇವಿಸಿ.
ಸಂಜೆಯಾದ ಬಳಿಕ ನೀರು ಕುಡಿಯುವ ಪ್ರಮಾಣವನ್ನು ಕಡಿಮೆ ಮಾಡಿ. ರಾತ್ರಿ ನೀರು ಕುಡಿಯುವುದು ಕೂಡ ಜೀರ್ಣಕ್ರಿಯೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಮಾಡಿ. ಸರಿಯಾಗಿ ನಿದ್ದೆ ಮಾಡದ ಹೊರತು ದೇಹ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ.




