ಆರೋಗ್ಯಆಹಾರಲೈಫ್ ಸ್ಟೈಲ್

ಹಸಿಮೆಣಸು ಬಹುಬೇಗ ಕೊಳೆಯುತ್ತಿದೆಯೇ?

ಪವಿತ್ರಾ ಶೆಟ್ಟಿ

ಅಂಗಡಿಗಳಿಂದ ತಂದ ಹಸಿ ಮೆಣಸಿನಕಾಯಿ ಬಹುಬೇಗ ಹಾಳಾಗುತ್ತಿದೆ ಎಂಬ ಚಿಂತೆ ಬಿಡಿ. ಅದನ್ನು ದೀರ್ಘಕಾಲದ ತನಕ ಸಂರಕ್ಷಿಸುವ ವಿಧಾನ ತಿಳಿಯಿರಿ.

ಹಸಿಮೆಣಸು ಕೊಳೆತು ಹೋಗುವುದು ಬೇಗ. ಫ್ರಿಜ್ಜಿನಲ್ಲಿಟ್ಟರೆ ಅದು ಬಹುಬೇಗ ಹಾಳಾಗುತ್ತದೆ. ಅಂಗಡಿಗಳಿಂದ ಕೊಂಡುತಂದ ಹಸಿಮೆಣಸನ್ನು ಮೊದಲು ಸ್ವಚ್ಛವಾಗಿ ತೊಳೆದು ಬಟ್ಟೆಯಲ್ಲಿ ಹರವಿ ಒಣಗಿಸಿ. ಬಳಿಕ ಅದರ ತೊಟ್ಟು ಪ್ರತ್ಯೇಕಿಸಿ. ಗಾಳಿಯಾಡದ ಬಾಕ್ಸ್​​ನಲ್ಲಿ ಒಂದರ ಮೇಲೊಂದರಂತೆ ಇಟ್ಟು ಮೇಲ್ಭಾಗಕ್ಕೆ ಟಿಶ್ಯು ಪೇಪರ್ ಹರಡಿ. ಬಿಳಿಯ ಖಾಲಿ ಪೇಪರ್ ಇಟ್ಟರೂ ಪರವಾಗಿಲ್ಲ.

ಕಾಗದದ ಟವಲ್ ನಲ್ಲಿ ನೀವು ಮೆಣಸಿನಕಾಯಿಗಳನ್ನು ಸಂಗ್ರಹಿಸಿಡಬಹುದು. ಸ್ವಚ್ಛವಾಗಿ ತೊಳೆದ ಬಳಿಕ ಯಾವುದೇ ಮೆಣಸಿನಕಾಯಿ ಕೊಳೆತಿದ್ದರೆ ಅದನ್ನು ಕತ್ತರಿಸಿ ತೆಗೆಯಿರಿ. ಸರಿಂದ ಹಸಿಮೆಣಸನ್ನು ಮಾತ್ರ ಟಿಪ್ಪರ್ ನಲ್ಲಿ ಸುತ್ತಿ ಫ್ರಿಜ್ ನಲ್ಲಿಡಿ. ಹೀಗೆ ಮಾಡುವುದರಿಂದ ವಾರಗಳ ತನಕ ಹಸಿಮೆಣಸು ಹಾಳಾಗದೆ ಉಳಿಯುತ್ತದೆ.

ತೇವಾಂಶವಿರುವ ಪ್ರದೇಶದಲ್ಲಿ ಹಸಿಮೆಣಸನ್ನು ಇಟ್ಟರೆ ಅದು ಕೊಳೆಯುವ ಸಂದರ್ಭವೇ ಜಾಸ್ತಿ. ಹಾಳಾದ ಹಸಿಮೆಣಸನ್ನು ಸರಿ ಇರುವ ಮೆಣಸಿನೊಂದಿಗೆ ಇಡುವ ತಪ್ಪನ್ನು ಮಾಡದಿರಿ.

Related Articles

Leave a Reply

Your email address will not be published. Required fields are marked *

Back to top button