ಹೊಸ ಅನುಮಾನ ಹುಟ್ಟುಹಾಕಿದ ರಾಜ್ ಕುಂದ್ರಾ ಹಳೇ ವಿಡಿಯೊ

ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಆಪ್ಗಳ ಮೂಲಕ ಅವುಗಳನ್ನು ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರ, ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದಿನೇ ದಿನೇ ಈ ಪ್ರಕರಣದಲ್ಲಿ ಹಲವರ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ನಟಿ ಶಿಲ್ಪಾಶೆಟ್ಟಿ ಅವರು ಭಾಗಿಯಾಗಿದ್ದಾರ ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಹಿಂದೆ ರಾಜ್ ಕುಂದ್ರ ನೀಡಿದ್ದ ಕೆಲವೊಂದು ಸಂದರ್ಶನದ ವಿಡಿಯೊಗಳು ಈಗ ವೈರಲ್ ಆಗಿದ್ದು, ಅದರಲ್ಲಿ ರಾಜ್ ಕುಂದ್ರ ಆಡಿರುವ ಮಾತುಗಳು ಅನುಮಾನಕ್ಕೆ ಎಡೆಮಾಡಿಕೊಡುತ್ತಿವೆ.
ಐಪಿಎಲ್ ಬೆಟ್ಟಿಂಗ್ ವಿವಾದದ ಬಳಿಕ ಸಂದರ್ಶನ ನೀಡಿದ್ದ ರಾಜ್ ಕುಂದ್ರ, ಈ ವಿವಾದ ಶಿಲ್ಪಾ ಶೆಟ್ಟಿ ಅವರ ಇಮೇಜ್ಗೆ ಧಕ್ಕೆಯಾಗುವುದಿಲ್ಲವೆ ಎಂಬ ಪ್ರಶ್ನೆಗೆ, ನಾವು ಪಾಲುದಾರರು, ಶಿಲ್ಪಾ ನನ್ನ ಪತ್ನಿ, ಇದನ್ನೆಲ್ಲ ಸಹಿಸಿಕೊಳ್ಳಬೇಕು’ ಎಂದು ಉತ್ತರಿಸಿದ್ದರು. ನಾನು ಏನೇ ಮಾಡಿದರೂ ಶಿಲ್ಪಾ ಶೆಟ್ಟಿ ಹೆಸರು ನನ್ನೊಂದಿಗೆ ಕೇಳಿಬರುತ್ತದೆ. ನಾವಿಬ್ಬರೂ ದಂಪತಿಯಾಗಿರುವುದರಿAದ ಜೀವನದಲ್ಲಿ ಏನೇ ಮಾಡಿದರೂ ಎಲ್ಲವನ್ನೂ ನಾವು ಸಹಿಸಿಕೊಳ್ಳಬೇಕಾಗುತ್ತೆ ಎಂದು ರಾಜ್ ಕುಂದ್ರ ನೇರವಾಗಿಯೇ ಉತ್ತರಿಸಿದ್ದರು.
ಶಿಲ್ಪಾ ನನ್ನನ್ನು ಸದಾ ಬೆಂಬಲಿಸುವ ಮಡದಿ. ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ನಾವಿಬ್ಬರೂ ಚೆನ್ನಾಗಿ ಅರಿತಿದ್ದೇವೆ. ತಪ್ಪು ಹೇಗಾಗುತ್ತದೆ ಎಂಬುದೇ ನಮಗೆ ಗೊತ್ತಿಲ್ಲ ಎಂದಿದ್ದರು ರಾಜ್ ಕುಂದ್ರ. ಈ ವಿಡಿಯೊದಲ್ಲಿ ರಾಜ್ ಕುಂದ್ರ ಮಾತು ಕೇಳಿದ ಕೆಲವರು, ಪ್ರಕರಣದಲ್ಲಿ ಶಿಲ್ಪಾ ಪಾತ್ರ ಇದ್ದರೂ ಇರಬಹುದು ಅಂದುಕೊಳ್ಳುತ್ತಿದ್ದಾರೆ. ಇದೆಲ್ಲದಕ್ಕೂ ತನಿಖೆಯಿಂದಲೇ ಉತ್ತರ ಸಿಗಬೇಕಿದೆ.
ಮೌನ ಮುರಿದ ಶಿಲ್ಪಾ ಶೆಟ್ಟಿ
ರಾಜ್ ಕುಂದ್ರ ಬಂಧನದ ಬಳಿಕ ಇದೇ ಮೊದಲ ಬಾರಿಗೆ ನಟಿ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಶಿಲ್ಪಾ ಶೆಟ್ಟಿ, ಕೋಪದಿಂದ ಹಿಂದೆ ನೋಡಬೇಡ, ಭಯದಿಂದ ಮುಂದೆ ಸಾಗಬೇಡ. ಆದರೆ ಸುತ್ತಮುತ್ತ ಎಚ್ಚರದಿಂದಿರು’ ಎಂದು ಪುಸ್ತಕವೊಂದರ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.
ನಾನು ಈ ಹಿಂದೆಯೂ ಸವಾಲುಗಳನ್ನು ಎದುರಿಸಿ ಉಳಿದುಕೊಂಡಿದ್ದೇನೆ. ಮುಂದೆಯೂ ಸವಾಲುಗಳನ್ನು ಎದುರಿಸಿ ಉಳಿದುಕೊಳ್ಳುತ್ತೇನೆ. ನಮ್ಮ ಜೀವನವನ್ನು ಬೇರೆಡೆಗೆ ಸೆಳೆಯುವ ಯಾವುದೂ ನಮಗೆ ಅಗತ್ಯವಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಹೊಸ ಬಾಂಬ್ ಸಿಡಿಸಿದ ಗೆಹನಾ
ಅಶ್ಲೀಲ ಚಿತ್ರ ನಿಮಾಣ ಪರಕರಣದಲ್ಲಿ ಹಲವರ ಹೆಸರು ಕೇಳಿಬಂದಿತ್ತು. ಅದರಲ್ಲಿ ಗೆಹನಾ ಹೆಸರು ಕೂಡ ಒಂದು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಗೆಹನಾ, ಸ್ಪೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ನಾನು ಕೆಲವು ತಿಂಗಳುಗಳ ಹಿಂದೆ ರಾಜ್ ಕುಂದ್ರ ಕಚೇರಿಗೆ ಭೇಟಿ ನೀಡಿದ್ದೆ. ಅಲ್ಲಿ ಕೆಲವು ಆಪ್ಗಳನ್ನು ಪ್ರಾರಂಭಿಸಲು ಯೋಜಿಸಲಾಗಿತ್ತು. ಜತೆಗೆ ಕೆಲವು ಸ್ಕ್ರಿಪ್ಟ್ಗಳನ್ನು ಚರ್ಚೆ ಮಾಡಿದ್ದೆವು. ಅದರಲ್ಲಿ ಒಂದು ಚಿತ್ರದಲ್ಲಿ ಶಮಿತಾ ಶೆಟ್ಟಿ ನಟಿಸುವುದೆಂದು ಪ್ಲಾನ್ ಆಗಿತ್ತು. ಈ ಸಿನಿಮಾವನ್ನು ನಾನು ನಿರ್ದೇಶನ ಮಾಡಬೇಕಿತ್ತು. ಇದಕ್ಕೆ ಶಮಿತಾ ಸಹ ಒಪ್ಪಿಕೊಂಡಿದ್ದರು ಎಂದು ಗೆಹನಾ ಆರೋಪಿಸಿದ್ದಾರೆ. ಈ ವಿಚಾರದ ಸತ್ಯಾಸತ್ಯೆತೆ ತನಿಖೆಯಿಂದಲೇ ತಿಳಿದು ಬರಬೇಕಿದೆ.




