ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೂ ಕೋವಿಡ್ ಸೋಂಕು

ಕೇರಳ: ತ್ರಿಶ್ಶೂರು ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿದ್ಯಾರ್ಥಿಗಳು 2 ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೂ ಸಹ 39 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.
ಈ ಹಿಂದೆ ಲಾಕ್ಡೌನ್ ನಿಂದ ಮುಚ್ಚಿದ್ದ ಕಾಲೇಜು ಜೂ.1ರಂದು ತೆರೆಯಲಾಗಿತ್ತು. ಒಂದು ಬ್ಯಾಚ್ ವಿದ್ಯಾರ್ಥಿಗಳು ಜೂ.5ರಂದು ಹಾಜರಾಗಿದ್ದರು. ಜೂ.6ರಂದು 175 ವಿದ್ಯಾರ್ಥಿಗಳ ಎರಡನೇ ಬ್ಯಾಚ್ ಹಾಜರಾಗಿತ್ತು. ಇವರಲ್ಲಿ ಓರ್ವನಿಗೆ ಮೊದಲ ದಿನದಂದೇ ಪಾಸಿಟೀವ್ ಬಂದಿದೆ. ಪ್ರಕರಣ ದೃಢಪಟ್ಟಾಗ ಎಲ್ಲಾ ವಿದ್ಯಾರ್ಥಿಗಳಿಗೂ ಜು.17ರಂದು ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟೀವ್ ದೃಢವಾದ 20 ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿತ್ತು. ನಂತರ ಕ್ಯಾಂಪಸ್ ನಲ್ಲಿ ಉಳಿದಿದ್ದವರ ಪೈಕಿ 19 ಮಂದಿಗೆ ಪಾಸಿಟೀವ್ ದೃಢಪಟ್ಟಿದೆ. ಜೂನ್ 6ರಿಂದ ಈವರೆಗೆ ಕಾಲೇಜಿನ ಒಟ್ಟು 39 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟೀವ್ ಬಂದಿದೆ.
ಹೀಗಾಗಿ ವ್ಯಾಕ್ಸಿನ್ ಹಾಕಿಸಿಕೊಂಡವರೆಲ್ಲ ಇನ್ನು ಸೇಫ್ ಎಂದುಕೊಂಡು, ನಿಯಮಗಳನ್ನು ಪಾಲಿಸದೆ ಮೈಮರೆತರೆ ಕೋವಿಡ್ ಸೋಂಕಿನ ಸಂಖ್ಯೆ ಪ್ರಮಾಣ ದ್ವಿಗುಣಗೊಂಡರೂ ಆಶ್ಚರ್ಯಪಡಬೇಕಿಲ್ಲ.




