ಉಡುಪಿ

ಪತಿಯಿಂದಲೇ ಕೊಲೆಯಾದ ವಿಶಾಲ ಗಾಣಿಗ; ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಪ್ರಕರಣ

ಉಡುಪಿ : ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವಿಶಾಲ್ ಗಾಣಿಗ ಮಹಿಳೆಯ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿತ್ತು. ಆದರೆ ಇದೀಗ ಪ್ರಕರಣ ತಾರ್ಕಿಕ ಅಂತ್ಯ ಕಂಡಿದ್ದು, ಪತಿಯೇ ಮಡದಿಯನ್ನು ತನ್ನ ಆರು ವರ್ಷದ ಮಗುವಿನ ಜನ್ಮದಿನದಂದೇ ಕೊಲೆಮಾಡಿರುವುದು ಬಯಲಾಗಿದೆ. ಆರೋಪಿ ಪತಿ ರಾಮಕೃಷ್ಣ ಪೊಲೀಸರ ಅತಿಥಿಯಾಗಿದ್ದಾನೆ.

ಪೊಲೀಸರು ವಿಶಾಲ ಗಾಣಿಗ ಪತಿ ರಾಮಕೃಷ್ಣನನ್ನು ಬಂಧಿಸಿದ್ದು, ಪೋಲಿಸ್ ಮೂಲಗಳಿಂದ ಪ್ರಕರಣದ ಕುರಿತ ಮಾಹಿತಿ ಲಭಿಸಿದೆ. ದುಬೈನಲ್ಲಿದ್ದುಕೊಂಡು ಬಾಡಿಗೆ ಹಂತಕರ ಮೂಲಕ ಕೊಲೆಗೆ ಸುಪಾರಿ ನೀಡಿದ್ದ. ಉತ್ತರ ಭಾರತ ಮೂಲದ ಸುಪಾರಿ ಹಂತಕರು ಈ ಕೃತ್ಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾಮಕೃಷ್ಣನ ಆಕ್ರಮ ಸಂಬಂಧ, ಆಸ್ತಿ ವ್ಯವಹಾರವೇ ವಿಶಾಲ ಕೊಲೆಗೆ ಕಾರಣ‌ವಾಯಿತಾ ಎನ್ನುವ ಪ್ರಶ್ನೆ ಕೂಡ ಇಲ್ಲಿ ಉದ್ಭವವಾಗಿದೆ. ಕೆಲ ದಿನಗಳ ಹಿಂದೆ ರಾಮಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು, ನಿನ್ನೆ ಆತನನ್ನು ಬಂಧಿಸಿದ್ದಾರೆ.

ಉಡುಪಿ ಪೊಲೀಸರು ಸುಪಾರಿ ಹಂತಕರನ್ನು ಬಂಧಿಸಿ, ಇಂದು ಉಡುಪಿಗೆ ಕರೆ ತಂದು ಅಧಿಕೃತ ಕೊಲೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. 12ರಂದು ಬ್ರಹ್ಮಾವರ ಸಮೀಪದ ಉಪ್ಪಿಕೋಟೆಯಲ್ಲಿರುವ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ವೀಶಅಲ ಗಾಣಿಗ ಕೊಲೆಯಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button