Breaking NewsLatestರಾಷ್ಟ್ರೀಯ

ಭಾರತದಲ್ಲಿ ಸೆಪ್ಟೆಂಬರ್​ನಿಂದ ರಷ್ಯನ್ ವ್ಯಾಕ್ಸಿನ್ ಸ್ಪುಟ್ನಿಕ್ ವಿ ಉತ್ಪಾದನೆ

ನವದೆಹಲಿ: ಸ್ಪುಟ್ನಿಕ್ ವಿ ಎಂಬ ರಷ್ಯನ್ ವ್ಯಾಕ್ಸಿನ್​ ಭಾರತದಲ್ಲಿಯೇ ಉತ್ಪಾದನೆಯಾಗಲಿದ್ದು, ಸೆಪ್ಟೆಂಬರ್​ನಲ್ಲಿ ಪ್ರಾಯೋಗಿಕ ಹಂತದ ವ್ಯಾಕ್ಸಿನ್ ಮೊದಲ ಬ್ಯಾಚ್ ಲಭ್ಯವಾಗುವ ನಿರೀಕ್ಷೆಯಿದೆ.

ಪುಣೆ ಮೂಲದ ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ಪುಟ್ನಿಕ್ ವಿ ವ್ಯಾಕ್ಸಿನ್ ಉತ್ಪಾದಿಸಲಿದ್ದು, ಈ ಸಂಬಂಧ ತಂತ್ರಜ್ಞಾನ ವರ್ಗಾವಣೆ ಈಗಾಗಲೇ ಆರಂಬವಾಗಿದೆ.

ಪ್ರತಿವರ್ಷ 300 ಮಿಲಿಯನ್ ಡೋಸ್ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ದಕ್ಷತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ಗಮನ ಸೆಳೆದಿರುವ ಸ್ಪುಟ್ನಿಕ್ ವ್ಯಾಕ್ಸಿನ್ ತಯಾರಿಕೆ ಭಾಗವಾಗುತ್ತಿರುವುದಕ್ಕೆ ಸೀರಮ್ ಸಂಸ್ಥೆ ಮುಖ್ಯಸ್ಥ ಅದಾರ್ ಪೂನಾವಾಲಾ ಸಂತಸ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಅನಿಶ್ಚಿತವಾಗಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಗಳು ಮತ್ತಯ ಸರ್ಕಾರಗಳ ಸಹಯೋಗ ಅಗತ್ಯವಾಗಿದ್ದು, ಭಾರತದಲ್ಲಿ ರಷ್ಯನ್ ವ್ಯಾಕ್ಸಿನ್ ಉತ್ಪಾದನೆ ಆರಂಬವಾಗಲಿರುವುದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಅಂಥದೊಮದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ ಅವರು.

Spread the love

Related Articles

Leave a Reply

Your email address will not be published. Required fields are marked *

Back to top button