
ಮಾಜಿ ಮುಖ್ಯಮಂತ್ರಿ ಎಚ್,ಡಿ. ಕುಮಾರಸ್ವಾಮಿ ಯುದ್ಧ ವಿರಾಮ ಘೋಷಿಸಿದ್ದಾರೆ.. ಆದರೆ ಸಂಸತ್ ಸದಸ್ಯೆ ಸುಮಲತಾ ಅಕ್ರಮ ಗಣಿಗಾರಿಕೆ ವಿಚಾರವನ್ನು ಸಂಸತ್ನಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಯುದ್ಧವನ್ನು ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಜಗಳದಲ್ಲಿ ಮುಖ್ಯ ವಿಚಾರ ಮರೆಯಾಗಿ ಹೋಗಿದೆ.. ಮಾಧ್ಯಮಗಳೂ ಈ ಮುಖ್ಯ ವಿಚಾರವನ್ನು ಮರೆತಿವೆ. ಅದು ಸುಮಲತಾ ಅವರು ಪ್ರಸ್ತಾಪಿಸಿದ ವಿಚಾರ. ವ್ಯಕ್ತಿಗಳಿಗಿಂತ ಈ ವಿಚಾರ ಮುಖ್ಯ. ಕೆಆರ್ ಎಸ್ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟಿಗೆ ಅಪಾಯವಿದೆಯೆ ಎಂಬುದು ಆ ವಿಚಾರ,, ಈ ಬಗ್ಗೆ ವಿಜ್ನಾನಿಗಳು ವರದಿ ನೀಡಬೇಕು, ಸರ್ಕಾರ ತಜ್ಣರ ಸಮಿತಿ ರಚಿಸಬೇಕು. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ.. ಆದರೆ ಅಕ್ರಮ ಗಣಿಗಾರಿಕೆಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಬೆಂಬಲ ನೀಡುತ್ತಿದ್ದಾರೆ.. ಕಳ್ಳರೆಲ್ಲ ಒಂದೇ…ಸುಮಲತಾ ಎಚ್ ಡಿ ಕೆ ಯುದ್ಧ ವಿರಾಮದ ನಂತರ ಸುದ್ದಿ ವಿಶ್ಲೇಷಣೆ… ಶಶಿಧರ್ ಭಟ್ ಅವರ ಕ್ಷಕಿರಣ.



