ಆರೋಗ್ಯಆಹಾರಲೈಫ್ ಸ್ಟೈಲ್

ನೀವು ಬಳಸುವ ಜೇನು ಪರಿಶುದ್ಧವೇ…?

ಪವಿತ್ರಾ

ಜೇನುತುಪ್ಪದ ಶುದ್ಧತೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನೀವು ಮನೆಗೆ ತಂದ ಜೇನುತುಪ್ಪ ಪರಿಶುದ್ಧತೆಯಿಂದ ಕೂಡಿದೆಯೇ ಎಂಬುದನ್ನು ನೀವೇ ಪರೀಕ್ಷಿಸಿ ದೃಢಪಡಿಸಿಕೊಳ್ಳಬಹುದು. ಹೇಗೆಂದಿರಾ?

ಒಂದು ಗಾಜಿನ ಲೋಟಕ್ಕೆ ಬಿಸಿನೀರನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ. ಇದು ನೀರಿನಲ್ಲಿ ತಕ್ಷಣ ಕರಗಿದರೆ ನಿಸ್ಸಂಶಯವಾಗಿ ಇದು ಕಲಬೆರಕೆಗೊಂಡಿದೆ ಎಂದರ್ಥ. ದಪ್ಪವಾದ ಎಳೆಯಾಗಿ ತಳಭಾಗದಲ್ಲಿ ಹೋಗಿ ಕುಳಿತುಕೊಂಡರೆ ಅದು ಶುದ್ಧವಾದುದು ಎಂದು ತಿಳಿಯಿರಿ.

ಒಂದು ಕಡ್ಡಿಗೆ ಹತ್ತಿ ಸುತ್ತಿ. ಅದನ್ನು ಜೇನುತುಪ್ಪದಲ್ಲಿ ಮುಳುಗಿಸಿ. ಉರಿಯುತ್ತಿರುವ ಮೇಣದ ಬತ್ತಿ ಬಳಿ ಕೊಂಡೊಯ್ಯಿರಿ. ಅ ತಕ್ಷಣ ಕಡ್ಡಿಗೆ ಬೆಂಕಿ ಹತ್ತಿಕೊಂಡರೆ ಅದು ಶುದ್ಧ ಜೇನು. ಸಮಯ ತೆಗೆದುಕೊಂಡರೆ ಅದು ಕಲಬೆರಕೆ ಜೇನು ಎಂದು ತಿಳಿಯಿರಿ.

ಟಿಶ್ಯೂ ಪೇಪರ್ ನ ಮೇಲೆ ಬಿದ್ದ ಶುದ್ಧ ಜೇನು ಕಾಗದದ ಮೇಲೆ ಹಾಗೆಯೇ ಉಳಿಯುತ್ತದೆ. ಕಲಬೆರಕೆ ಇಲ್ಲದ ಜೇನು ಎರಡು ಬೆರಳುಗಳ ಮಧ್ಯೆ ದಪ್ಪ ಎಳೆಗಳನ್ನು ಉಂಟುಮಾಡುತ್ತದೆ

Spread the love

Related Articles

Leave a Reply

Your email address will not be published. Required fields are marked *

Back to top button