
ಪವಿತ್ರಾ
ಮನೆಯಲ್ಲಿ ಒಮ್ಮೆ ಚಕ್ಕುಲಿ ಇಲ್ಲವೇ ಯಾವುದೋ ತಿಂಡಿ ತಯಾರಿಗೆಂದು ಎಣ್ಣೆ ಬಳಸಿದಿರಿ ಎಂದಿಟ್ಟುಕೊಳ್ಳೊಣ. ಕೊನೆಗೆ ಉಳಿದ ಎಣ್ಣೆಯನ್ನು ಏನು ಮಾಡುವುದು? ಬಳಸುವುದಾದರೂ ಹೇಗೆ?
ಕರಿದ ಎಣ್ಣೆಯನ್ನು ಮತ್ತೆ ಕರಿಯಲು ಬಳಸುವುದು ಒಳ್ಳೆಯದಲ್ಲ ಎಂಬುದನ್ನು ನೀವು ಹಲವು ಬಾರಿ ಕೇಳಿರಬಹುದು. ಇದರಿಂದ ಕೊಬ್ಬಿನ ಅಂಶ ಹೆಚ್ಚುತ್ತದೆ ಹಾಗೂ ದೇಹ ತೂಕ ವಿಪರೀತ ಏರುತ್ತದೆ. ಹಾಗೆಂದು ಉಳಿದ ಎಣ್ಣೆಯನ್ನು ಎಸೆಯಲು ಸಾಧ್ಯವೇ?
ಹೀಗೆ ಒಮ್ಮೆ ಕರಿದ ಎಣ್ಣೆಯನ್ನು ಪ್ರತ್ಯೇಕ ಬಾಟಲಿಗೆ ಹಾಕಿಡಿ. ಮತ್ತೆ ಅದನ್ನು ಕರಿಯಲು ಬಳಸದಿರಿ. ಅದರ ಬದಲು ಒಗ್ಗರಣೆಗೆ ಈ ಎಣ್ಣೆಯನ್ನೇ ಬಳಸಿ. ಇದರಿಂದ ಎಣ್ಣೆ ಮತ್ತೆ ಹೆಚ್ಚು ಕುದಿಯುವುದಿಲ್ಲ. ಸಾಸಿವೆ, ಜೀರಿಗೆ ಪಟ ಪಟ ಎನ್ನುವಷ್ಟು ಎಣ್ಣೆ ಬಿಸಿಯಾದರೆ ಸಾಕು.
ಇನ್ನು ಉಳಿದಂತೆ ಈ ಎಣ್ಣೆಯನ್ನು ಇನ್ನೊಂದು ತಿಂಡಿ ಕರಿಯಲು ಬಳಸಿದಿರಿ. ಎರಡು ಮೂರು ಬಾರಿ ಹೀಗೆ ಎಣ್ಣೆ ಕುದಿದರೆ ಕ್ಯಾನ್ಸರ್ ನಂಥ ಮಹಾಮಾರಿ ರೋಗಕ್ಕೆ ಆಹ್ವಾನ ನೀಡಿದಂತಾದೀತು. ಅತಿಯಾಗಿ ಆಹಾರವನ್ನು ಕರಿದ ಎಣ್ಣೆಯನ್ನು ಮರುಬಳಕೆ ಮಾಡದಿರಿ




