ಕೂದಲು ಉದುರುವ ಸಮಸ್ಯೆಗೆ ಹೀಗೆ ಮಾಡಿ

ಪವಿತ್ರಾ
ನಿರಂತರವಾಗಿ ಕೂದಲು ಉದುರುತ್ತಿದ್ದರೆ ಯಾರಿಗೆ ಆತಂಕ ವಾಗುವುದಿಲ್ಲ ಹೇಳಿ. ನಿಮ್ಮ ತಲೆ ಸಂಪೂರ್ಣ ಬೋಳಾಗುವ ಮುನ್ನ ಕಪ್ಪು ಜೀರಿಗೆ ಎಣ್ಣೆಯನ್ನು ಬಳಸಿ ನೋಡಿ.
ಅಧ್ಯಯನವೊಂದರ ಪ್ರಕಾರ ಕಪ್ಪು ಜೀರಿಗೆಯಿಂದ ಕೂದಲು ಉದುರುವುದನ್ನು ನಿಲ್ಲಿಸಬಹುದು ಎಂಬುದನ್ನು ದೃಢಪಡಿಸಿದೆ. ಹಾಗಿದ್ದರೆ ತಡವೇಕೆ ನೀವೇ ಮನೆಯಲ್ಲಿ ಕಪ್ಪು ಜೀರಿಗೆ ಇಂದ ಎಣ್ಣೆ ತಯಾರಿಸಬಹುದು.
ಕಪ್ಪು ಜೀರಿಗೆಯನ್ನು ತಂದು ಅದನ್ನು ಸ್ವಚ್ಛಗೊಳಿಸಿ. ಕಸ ಕಲ್ಲುಗಳಿದ್ದರೆ ಪ್ರತ್ಯೇಕಿಸಿ. ಇದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ ಪುಡಿಮಾಡಿಟ್ಟುಕೊಳ್ಳಿ.
ಈ ಪುಡಿಯನ್ನು ಕಲಬೆರಕೆ ಇಲ್ಲದ ತಾಜಾ ತೆಂಗಿನ ಎಣ್ಣೆಗೆ ಸೇರಿಸಿ. ಇದರ ಕಾಲುಭಾಗದಷ್ಟು ಹರಳೆಣ್ಣೆಯನ್ನು ಸೇರಿಸಿ. ಚೆನ್ನಾಗಿ ಮಗುಚಿ. ಗಾಳಿಯಾಡದ ಜಾರಿಗೆ ವರ್ಗಾಯಿಸಿ ನಾಲ್ಕರಿಂದ ಐದು ದಿನ ಬಿಸಿಲಿನಲ್ಲಿ ಇಡಿ. ಒಂದು ವಾರದ ಬಳಿಕ ಸ್ನಾನಕ್ಕೆ ಒಂದು ಗಂಟೆ ಮುನ್ನ ನೆತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.
ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುತ್ತದೆ.




