ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಎಸ್ ಆರ್ ಪಾಟೀಲ್

ಧಾರವಾಡ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇದಕ್ಕೆ ಅವರದೇ ಪಕ್ಷದ ಇಬ್ಬರು ನಾಯಕರ ಹೇಳಿಕೆಗಳೆ ಸಾಕ್ಷಿಯಾಗಿವೆ, ಹಿರಿಯ ಬಿಜೆಪಿ ನಾಯಕರು ಹಾಗೂ ಪರಿಷತ್ ಸದಸ್ಯರಾಗಿರು ಹೆಚ್ ವಿಶ್ವನಾಥ್ ಅವರು ನೇರವಾಗಿ ಅವರದೇ ಪಕ್ಷದ ಆಡಳಿತದ ವಿರುದ್ಧ ಆರೋಪ ಮಾಡಿದ್ದಾರೆ ಜೊತೆಗೆ ಶಾಸಕ ಯತ್ನಾಳವರು ಆರೋಪ ಮಾಡುತ್ತಲ್ಲೇ ಬರುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ವಾಗ್ದಾಳಿ ನಡೆಸಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಬಿಜೆಪಿ ಭ್ರಷ್ಟಾಚಾರದ ಕುರಿತಾಗಿ ಅವರದೇ ಪಕ್ಷದ ನಾಯಕರು ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಹಿರಿಯ ಪರಿಷತ್ ಸದಸ್ಯ ವಿಶ್ವನಾಥ ಅವರು, ಬಿಜೆಪಿಯವರು ಭದ್ರಾ ಯೋಜನೆಯಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದಿದ್ದಾರೆ, ಜೊತೆಗೆ ಶಾಸಕ ಯತ್ನಾಳ ಅವರು ಕೂಡಾ ಪ್ರತಿದಿನ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ, ಅಲ್ಲದೆ ಈ ಹಿಂದೆ ಲೂಟಿ ಮಾಡಿ ಹೋಗುತ್ತಿದ್ದರು, ಅದೇ ರೀತಿಯಲ್ಲಿ ಇಂದು ರಾಜ್ಯದಲ್ಲಿ ಬಿಜೆಪಿ ಪಕ್ಷದವರು ಡಕಾಯತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇದಕ್ಕೆ ಅವರದೇ ಪಕ್ಷದ ಇಬ್ಬರು ನಾಯಕರ ಹೇಳಿಕೆಗಳೆ ಸಾಕ್ಷಿಯಾಗಿವೆ, ಹಿರಿಯ ಬಿಜೆಪಿ ನಾಯಕರು ಹಾಗೂ ಪರಿಷತ್ ಸದಸ್ಯರಾಗಿರು ಹೆಚ್ ವಿಶ್ವನಾಥ ಅವರು ನೇರವಾಗಿ ಅವರದೇ ಪಕ್ಷದ ಆಡಳಿತದ ವಿರುದ್ಧ ಆರೋಪ ಮಾಡಿದ್ದಾರೆ. ಜೊತೆಗೆ ಶಾಸಕ ಯತ್ನಾಳವರು ಆರೋಪ ಮಾಡುತ್ತಲ್ಲೇ ಬರುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ವಾಗ್ದಾಳಿ ನಡೆಸಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಬಿಜೆಪಿ ಭ್ರಷ್ಟಾಚಾರದ ಕುರಿತಾಗಿ ಅವರದೇ ಪಕ್ಷದ ನಾಯಕರು ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಹಿರಿಯ ಪರಿಷತ್ ಸದಸ್ಯ ವಿಶ್ವನಾಥ ಅವರು, ಬಿಜೆಪಿಯವರು ಭದ್ರಾ ಯೋಜನೆಯಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದಿದ್ದಾರೆ, ಜೊತೆಗೆ ಶಾಸಕ ಯತ್ನಾಳ ಅವರು ಕೂಡಾ ಪ್ರತಿದಿನ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ, ಅಲ್ಲದೆ ಈ ಹಿಂದೆಡಕಯತ್ತರು ಲೂಟಿ ಮಾಡಿ ಹೋಗುತ್ತಿದ್ದರು, ಅದೇ ರೀತಿಯಲ್ಲಿ ಇಂದು ರಾಜ್ಯದಲ್ಲಿ ಬಿಜೆಪಿ ಪಕ್ಷದವರು ಡಕಾಯತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ ಹೋಗಿದೆ ಅವರದೇ ಪಕ್ಷದ ಒಬ್ಬ ಮಂತ್ರಿ ಪಿಎ ವಿರುದ್ಧ, ರಾಜ್ಯ ಬಿಜೆಪಿ ಉಪಾಧ್ಯಕ್ಷರು ದೂರು ನೀಡಿದ್ದಾರೆ, ಅವರು ನೀಡಿರುವ ದೂರು ಮಿನಿಸ್ಟರ್ ಪಿಎ ವಿರುದ್ಧ ಅಲ್ಲಾ ಅದೂ ಮಿನಿಸ್ಟರ್ ವಿರುದ್ಧವೇ ಅವರು ದೂರು ನೀಡಿದ ಹಾಗೇ, ಬಿಜೆಪಿಯಲ್ಲಿ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಕುಟುಕಿದರು.
ನಾವೇನೂ ಅಂಗಡಿ ಬಾಗಿಲ ತರಹ ತೆರದು ಕುತ್ತಿಲ್ಲಾ
ನಾವೇನೂ ಅಂಗಡಿ ಬಾಗಿಲ ತರಹ ತೆರದು ಕುಳಿತಿಲ್ಲ, ಪಕ್ಷದ ಸಿದ್ಧಾಂತ-ತತ್ವಗಳನ್ನು ನಂಬಿ ಬರುವವರು ಬರಬಹುದು ಪಕ್ಷಕ್ಕೆ ಅರ್ಜಿ ಹಾಕಿ ಬರಬಹುದಾಗಿದೆ. ಆದರೆ ಬಂದ ತಕ್ಷಣವೇ ಎಲ್ಲರನ್ನು ಕರೆದುಕೊಳ್ಳಲು ಆಗದು, ಅವರು ಪಕ್ಷದ ಕಮಿಟಿ ಮುಂದೆ ಅರ್ಜಿಯನ್ನು ಹಾಕಬೇಕು, ನಂತರ ಅದನ್ನು ಕಮಿಟಿಯವರು ಪರಿಶೀಲನೆ ಮಾಡಿ, ಆ ನಾಯಕನ ಬಗ್ಗೆ ರಾಜ್ಯ ಹಾಗೂ ಕೇಂದ್ರ ನಾಯಕರು ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಬರುವವರ ಅರ್ಜಿ ಪುರಷ್ಕರಿಸದ ಮೇಲೆ ಪಕ್ಷದ ಒಳಗೆ ಕರೆದುಕೊಳ್ಳಲಾಗುವುದು, ನಾವು ಈಗಾಗಲೇ ನೀವು ಬರೀ ನೀವು ಬರೀ ಅಂತಾ ಎಲ್ಲೂ ಕರೆದಿಲ್ಲಾ, ಪಕ್ಷದ ಸಿದ್ಧಾಂತ ತತ್ವಗಳನ್ನು ಒಪ್ಪಿಕೊಂಡ ಬರುವವರು ಬರಬಹುದು, ಅದನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಹೇಳಿದ್ದಾರೆ ಎಂದರು.
