ಉಡುಪಿ

ಫೋಟೋಗ್ರಾಫರ್ ಅಶೋಕ್ ಕುಮಾರ್ ಶೆಟ್ಟಿ ಅಪಘಾತದಲ್ಲಿ ಸಾವು

ಉಡುಪಿ: ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಬೆಳಗಿನ ಜಾವ ಕಂಟೈನರ್ ಲಾರಿಗೆ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಛಾಯಾಗ್ರಹಕ ಹಾಗೂ ಪುತ್ರ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಫೋಟೋಗ್ರಾಫರ್ ಅಶೋಕ್ ಕುಮಾರ್ (58) ಶೆಟ್ಟಿ ಮೃತಪಟ್ಟಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಪನ್ನಗ್ ಶೆಟ್ಟಿ

ಅವರು ಉಡುಪಿ ಜಿಲ್ಲೆಯ ಸೌತ್ ಕೆನರಾ ಫೋಟೋಗ್ರಫಿ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಶೋಕ್ ಕುಮಾರ್ ಶೆಟ್ಟಿಯವರ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ನಾಳೆ ಬೆಳಗ್ಗೆ ಎಂಟು ಗಂಟೆಗೆ ಸ್ವಗೃಹದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು, ಫೋಟೋಗ್ರಫಿಯಲ್ಲಿ ತನ್ನದೇ ಛಾಪನ್ನು ಜಿಲ್ಲೆಯಲ್ಲಿ ಮೂಡಿಸಿದ್ದರು. ಅನೇಕ ಯುವ ಫೋಟೋಗ್ರಾಫರ್​ಗಳನ್ನು ಸೃಷ್ಟಿಸಿ ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು.

ಅಪಘಾತದಲ್ಲಿ ಅವರ ಪುತ್ರ ಪನ್ನಗ್ ಶೆಟ್ಟಿ (23) ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Spread the love

Related Articles

Back to top button