Breaking Newsಕಲಬುರ್ಗಿಜಿಲ್ಲಾ ಸುದ್ದಿ

ಕೇಂದ್ರ ಸರ್ಕಾರ ಕೋವಿಡ್​ನ್ನು ಹತೋಟಿಗೆ ತರಲು ಸಾಕಷ್ಟು ಶ್ರಮ ಹಾಕಿದೆ: ಡಿ.ಕೆ ಅರುಣಾ

ಕಲಬುರಗಿ: ಕಳೆದ ಒಂದು ವರ್ಷದಿಂದ ಇಡೀ ದೇಶಕ್ಕೆ ಕಂಟಕವಾಗಿ ಪರಿಣಮಿಸಿದ ಕೊರೊನಾ ವೈರಸ್​​ನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಡಿ ದೇಶದಲ್ಲಿ ಬದ್ದತೆಯಿಂದ ನಿಭಾಯಿಸಿ, ಕೊರೊನಾ ನಿಯಂತ್ರಣಕ್ಕೆ ತರಲು ಸಾಕಷ್ಟು ಶ್ರಮ ಹಾಕಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ರಾಜ್ಯ ಸಹ ಪ್ರಭಾರಿ ಡಿ.ಕೆ.ಅರುಣಾ ಹೇಳಿದರು.

ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಲಬುರಗಿ ಗ್ರಾಮಾಂತರ ಜಿಲ್ಲೆಯ, ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಇಡೀ ದೇಶದಲ್ಲಿ ಕೊರೊನಾ ತಾಂಡವಾಡುತ್ತಿರುವ ಸಮಯದಲ್ಲಿ ವಿರೋಧ ಪಕ್ಷಗಳು ನರೇಂದ್ರ ಮೋದಿ ಅವರನ್ನು ಟೀಕಿಸಿ, ಕೋವಿಡ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದರು, ಆದರೆ ವಿಶ್ವರ ಅನೇಕ ರಾಷ್ಟ್ರಗಳು ಮೋದಿ ಅವರ ಕೋವಿಡ್ ನಿರ್ವಹಣೆಯ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ ಎಂದರು.

ಇಡೀ ದೇಶಕ್ಕೆ ಕಳಂಕಿತವಾದ 370 ಕಲಂ, ಕಾನೂನನ್ನು ನರೇಂದ್ರ ಮೋದಿ ಅವರ ಹೊಗಲಾಡಿಸಿ, ದೇಶದಲ್ಲಿ ಒಂದೇ ಕಾನೂನು ಜಾರಿಗೆ ಮಾಡುವ ಮೂಲಕ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ 70 ವರ್ಷಗಳಿಂದ ಈ ದೇಶವನ್ನು ಲೂಟಿ ಮಾಡಿ ಬಡವರಿಗೆ,ಹಿಂದುಳಿದವರಿಗೆ, ದಲಿತರಿಗೆ ಅನ್ಯಾಯ ಮಾಡಿದೆ ಎಂದರು. ಆ 70 ವರ್ಷದ ತಪ್ಪುಗಳನ್ನು ಈಗ ನರೇಂದ್ರ ಮೋದಿ ಅವರು ಒಂದೊಂದಾಗಿ ಸರಿಪಡಿಸಲು ಮುಂದಾಗಿದ್ದಾರೆ ಎಂದರು. ಏಕ್ ದೇಶ ಏಕ್ ಕಾನೂನು ಇರಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯ ನಡೆದಿದೆ ಎಂದರು.

ಕಲಬುರಗಿ ಮೊದಲ ಸಲ ಭೇಟಿ

ಕರ್ನಾಟಕ ರಾಜ್ಯದ ಕಲಬುರಗಿಗೆ ಇದು ನನ್ನ ಮೊದಲ ಭೇಟಿಯಾಗಿದೆ. ಜಿಲ್ಲೆಯ ಎಲ್ಲ ನಾಯಕರ ಸಮ್ಮುಖದಲ್ಲಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಇಡೀ ಕರ್ನಾಟಕದಲ್ಲಿ ಒಂದು ವರ್ಷದವರೆಗೂ ಬಿಜೆಪಿ ಯ ಪ್ರತಿಯೊಬ್ಬ ಕಾರ್ಯಕರ್ತನು ಒಂದು ಗಿಡವನ್ನು ನೆಟ್ಟಿ ಅದನ್ನು ಆರೈಕೆ ಮಾಡುವ ಅಭಿಯಾನ ನಡೆದಿದೆ. ಹೀಗಾಗಿ ಎಲ್ಲ ಕಾರ್ಯಕರ್ತರು ಒಂದು ಗಿಡವನ್ನು ನೆಟ್ಟಿದ ಮೇಲೆ ಅದನ್ನು ದೊಡ್ಡದಾಗಿ ಮಾಡುವ ಗುರಿಯನ್ನು ಹೊಂದಿರಬೇಕೆಂದು ಹೇಳಿದರು.

ಸ್ವಚ್ಛ ಹಾಗೂ ಶುದ್ಧ ವಾತಾವರಣವನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಮಾಡಬೇಕು. ರಾಜ್ಯದಲ್ಲಿ ಮುಂದೆ ಬರುವ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯಗಳು ಕಾರ್ಯಕರ್ತರಿಂದ ಆಗಬೇಕಿದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button