ಸಿನಿಮಾಸೆಲೆಬ್ರಿಟಿ

ಯತಿರಾಜ್ ಜಗ್ಗೇಶ್ ಮತ್ತು ಡ್ಯಾನ್ಸ್ ರಾಜಾ ಡ್ಯಾನ್ಸ್!

ಪೂರ್ಣ ವಿ-ರಾಮ

ನವರಸ ನಾಯಕ ಜಗ್ಗೇಶ್ ಎರಡನೇ ಮಗ ಯತಿರಾಜ್ ಮತ್ತೆ ಸುದ್ದಿಯಾಗಿದ್ದಾನೆ. ಮೊನ್ನೆ ತಾನೇ ಕಾರ್ ಆಕ್ಸಿಡೆಂಟ್ ಮಾಡಿಕೊಂಡು ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ಯತಿ, ಇದೀಗ ತನ್ನ ತಂದೆಯ ಫಾರ್ಮ್ ಹೌಸ್ ನಲ್ಲಿ ಡ್ಯಾನ್ಸ್ ಮಾಡುತ್ತಾ ಸಾಗುತ್ತಿರುವ ವೀಡಿಯೋ ಒಂದು ವೈರಲ್ ಆಗಿದೆ!

ಆಕ್ಸಿಡೆಂಟ್ ನಡೆದ ಜಾಗದ ಸಮೀಪದಲ್ಲೇ ಜಗ್ಗೇಶ್ ಅವರ ಫಾರ್ಮ್ ಹೌಸ್ ಒಂದಿದೆ. ಚಿಕ್ಕಬಳ್ಳಾಪುರದಲ್ಲಿರೋ ಅದೇ ಗೆಸ್ಟ್ ಹೌಸ್ ನಲ್ಲಿ ನಡೆದುಕೊಂಡು ಹೋಗಹೋಗುತ್ತಾ ಜಗ್ಗೇಶ್ ಪುತ್ರ ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ದಾನೆ. ವಿಚಿತ್ರ ಎಂದರೆ ಆಕ್ಸಿಡೆಂಟ್ ಆದ ಕೆಲವೇ ಕ್ಷಣಗಳಲ್ಲಿ ಯತಿರಾಜ್ ಆ ಫಾರ್ಮ್ ಹೌಸ್ ಗೆ ತೆರಳಿದ್ದರು. ಅಲ್ಲಿ ಕೆಲ ಕಾಲ ವಾಕ್ ಮಾಡಿ, ರಿಲ್ಯಾಕ್ಸ್ ಆಗಿ ನಂತರ ಆಸ್ಪತ್ರೆಗೆ ತೆರಳಿದರು ಎನ್ನಲಾಗಿದೆ!

ವಿಚಿತ್ರವಾಗಿ ಆಡ್ತಿದ್ದಾರೆ ಯಾಕೆ?
ಯತಿಯನ್ನು ನಂತರ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಲಾಗಿದೆ. ಅದಾದನಂತರ ಹೊರಬರುವಾಗ ಮಾಧ್ಯಮದ ಮಂದಿ ಅವರನ್ನು ಆಕ್ಸಿಡೆಂಟ್ ಹೇಗೆ ಆಯಿತು ಎಂದು ಕೇಳಿದ್ದಾರೆ. ಅದಕ್ಕೆ ಯತಿರಾಜ್ ಕೈಯನ್ನು ಆಕಾಶಕ್ಕೆ ತೋರಿಸುತ್ತಾ, “ಟಿಶ್ಕ್ಯಾವ್” ಅಂತ ಕಾರು ಪಲ್ಟಿ ಆಯ್ತು ಎಂದು ಎಂಜಲು ನುಂಗಿದ್ದಾರೆ. ನಂತರ ಮಾಧ್ಯಮ ಪ್ರತಿನಿಧಿಗಳು, ಜನ ಬೇರೆ ರೀತಿಯೇ ಮಾತನಾಡುತ್ತಿದ್ದಾರೆ. ದಯವಿಟ್ಟು ಪ್ರತಿಕ್ರಿಯೆ ನೀಡಿ ಎಂದಿದ್ದಕ್ಕೆ, ನಾಯಿ ಅಡ್ಡ ಬಂದಿದ್ದು ಹೌದು ಎಂದಷ್ಟೇ ಹೇಳಿ ಕಾರು ಹತ್ತಿ ಹೊರಟುಬಿಟ್ಟಿದ್ದಾರೆ!

ಹೊರನೋಟಕ್ಕೆ ಅದು ನಾಯಿಯನ್ನು ತಪ್ಪಿಸಲು ಆದ ಅಟ್ಯಾಕ್ ಎನಿಸಿದರೂ ಯತಿರಾಜ್ ಅದ್ಯಾಕೆ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ? ತೋಟದ ಮನೆಯಲ್ಲಿ ನಡೆನಡೆದುಕೊಂಡು ಹೋಗುತ್ತಾ ಡ್ಯಾನ್ಸ್ ಮಾಡಿದ್ದಾರೆ?

ವಿಚಿತ್ರಾನಪ್ಪಾ…!

Spread the love

Related Articles

Leave a Reply

Your email address will not be published. Required fields are marked *

Back to top button