ಉತ್ತರ ಕನ್ನಡ
ನೀರು ಸೇದಲು ಹೋಗಿ ತೆರೆದ ಬಾವಿಗೆ ಬಿದ್ದ ವೃದ್ಧೆಯ ರಕ್ಷಣೆ

ಕಾರವಾರ : ತೆರೆದ ಬಾವಿಯಲ್ಲಿ ನೀರು ಸೇದಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಭಟ್ಕಳ ತಾಲೂಕಿನ ಸೋಡಿಗದ್ದೆಯಲ್ಲಿ ನಡೆದಿದೆ.
ಸೋಡಿಗದ್ದೆ ನಿವಾಸಿಯಾಗಿರುವ ನಾಗಮ್ಮ (60) ತನ್ನ ಮನೆಯ ತೆರೆದ ಬಾವಿಯಿಂದ ನೀರು ಸೇದುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದು, ತಕ್ಷಣ ವಿಷಯ ತಿಳಿದ ಮನೆಯವರು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ.ತಕ್ಷಣ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಏಳು ಅಡಿ ವಿಸ್ತೀರ್ಣದ 40 ಅಡಿ ಆಳದ ಬಾವಿಯಲ್ಲಿ ಬಿದ್ದ ವೃದ್ಧೆಯನ್ನು ರಕ್ಷಣೆ ಮಾಡಿ ಬಾವಿಯಿಂದ ಮೇಲಕ್ಕೆ ಎತ್ತಿ ಪ್ರಥಮ ಚಿಕಿತ್ಸೆ ನೀಡಿ ಮನೆಯವರ ವಶಕ್ಕೆ ನೀಡಿದರು.




