Breaking NewsLatestಮೆಟ್ರೋರಾಜ್ಯರಾಷ್ಟ್ರೀಯವಾಣಿಜ್ಯ

ತೈಲ ತುಟ್ಟಿ ಬೆನ್ನಲ್ಲೇ ಮತ್ತೊಂದು ಬರೆ; ಅಡುಗೆ ಅನಿಲ ಬೆಲೆ 25 ರೂ. ಏರಿಕೆ!

ಅಡುಗೆ ಅನಿಲದ ಬೆಲೆಯನ್ನು ಮತ್ತೆ 25.5ರೂ ಏರಿಕೆ ಮಾಡಲಾಗಿದೆ.

ದೆಹಲಿ, ಮುಂಬೈ, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆ 25.5 ರೂ ಏರಿಕೆಯಾಗಿದ್ದು, ಈ ಬೆಲೆ ಇಂದಿನಿಂದಲೇ (ಜು.1)ಜಾರಿಯಾಗಿದೆ. ದೆಹಲಿ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ 14.2 ಕೆ.ಜಿಯ ಪ್ರತಿ ಸಿಲಿಂಡರ್‌ ಗೆ ರೂ. 834.50 ಆಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.

ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಇದಕ್ಕಿಂತ ಹೆಚ್ಚಾಗಿದ್ದು, 850.50 ರೂ ಇದೆ. ಕಳೆದ ಆರು ತಿಂಗಳಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ಬರೋಬ್ಬರಿ 140 ರೂ ಗಳಷ್ಟು ಏರಿಕೆಯಾಗಿದೆ. ಉಳಿದಂತೆ, 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನೂ 76 ರೂಪಾಯಿಗೆ ಏರಿಸಲಾಗಿದೆ.

ಪ್ರತೀ ತಿಂಗಳಲ್ಲೂ 1ನೇ ತಾರೀಖಿಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಕಳೆದ ಮೇ1 ರಂದು ಅನಿಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.

ಕಳೆದ ನಾಲ್ಕು ತಿಂಗಳ ಹಿಂದೆ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಹೆಚ್ಚಿಸಲಾಗಿತ್ತು. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕೊನೆಯ ಪರಿಷ್ಕರಣೆ ಏಪ್ರಿಲ್‌ನಲ್ಲಿ ಮಾಡಲಾಗಿತ್ತು,
ಏಪ್ರಿಲ್ ಆರಂಭದಲ್ಲಿ 10 ರೂಗಳನ್ನು ಕಡಿಮೆ ಮಾಡಿದ ನಂತರ, ದೇಶೀಯ ಬೆಲೆ ದೆಹಲಿಯಲ್ಲಿ ಎಲ್‌ಪಿಜಿ 809 ರೂ.ಗೆ ಏರಿದೆ.
ಒಟ್ಟಾರೆ ಇತ್ತೀಚಿನ ಏರಿಕೆಯೊಂದಿಗೆ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 2021 ರಲ್ಲಿ 140.50 ರೂಪಾಯಿ ಹೆಚ್ಚಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button