Breaking NewsLatestರಾಷ್ಟ್ರೀಯಸುದ್ದಿ

ಸಮಂತಾಗೆ ಕಾಡುತ್ತಿರುವ ಕಾಯಿಲೆ ಯಾವುದು?

ಹೈದರಾಬಾದ್‌: ನಟಿ ಸಮಂತಾ ರುತ್ ಪ್ರಭು ‘ಮಯೋಸಿಟಿಸ್’ (ಸ್ನಾಯು ಉರಿಯೂತ) ಎಂಬ ಕಾಯಿಲೆಗೆ ತುತ್ತಾಗಿರುವ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಬಹಿರಂಗಪಡಿಸಿದ್ದಾರೆ.

ಟಾಲಿವುಡ್‌ ಅಂಗಳದಲ್ಲಿ ಕೆಲವು ತಿಂಗಳುಗಳ ಹಿಂದೆ ಸಮಂತಾ ಆರೋಗ್ಯ ಸರಿ ಇಲ್ಲ ಎಂಬ ವದಂತಿಗಳು ಹರಡಿದ್ದವು.

ಆದರೆ, ಇದಕ್ಕೆ ಸಮಂತಾ ಅವರು ಸ್ಪಷ್ಟನೆ ನೀಡಿರಲಿಲ್ಲ. ಇದೀಗ ತಮ್ಮ ಆರೋಗ್ಯದ ಬಗ್ಗೆ ಮೌನ ಮುರಿದಿದ್ದು ತಾನು ಸ್ನಾಯು ಉರಿಯೂತದಿಂದ ಬಳಲುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಸಂಪೂರ್ಣವಾಗಿ ಗುಣಮುಖಳಾದ ಮೇಲೆ ಈ ವಿಷಯ ತಿಳಿಸೋಣ ಎಂದು ಕೊಂಡಿದ್ದೆ. ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದು ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖಳಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button