ಆಹಾರಲೈಫ್ ಸ್ಟೈಲ್

ನೆಲ್ಲಿಕಾಯಿ ತೊಕ್ಕು

ಬೇಕಾಗುವ ಪದಾರ್ಥಗಳು
ನೆಲ್ಲಿಕಾಯಿ -20
ಎಣ್ಣೆ- 1 ಬಟ್ಟಲು
ಸಾಸಿವೆ- 1 ಚಮಚ
ಅರಿಶಿಣದ ಪುಡಿ- 1 ಚಮಚ
ಜೀರಿಗೆ ಪುಡಿ- 1 ಚಮಚ
ಇಂಗು- 1 ಚಮಚ
ಹುರಿದು ಪುಡಿ ಮಾಡಿರುವ ಮೆಂತ್ಯೆ 2 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಖಾರದಪುಡಿ- 2 ಚಮಚ
ಮಾಡುವ ವಿಧಾನ: ಕುಕ್ಕರ್ ನಲ್ಲಿ ನೆಲ್ಲಿಕಾಯಿಗಳನ್ನು ಹಾಕಿ 3-4 ವಿಷಲ್ ಕೂಗಿಸಿ, ತಣ್ಣಗಾದ ಬಳಿಕ ನೆಲ್ಲಿಕಾಯಿ ಬೀಜಗಳನ್ನು ತೆಗೆದು, ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ, ಇಂಗು, ಅರಿಶಿನದಪುಡಿ, ಮೆಂತ್ಯೆಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ರುಬ್ಬಿಕೊಂಡಿರುವ ನೆಲ್ಲಿಕಾಯಿ ಪೇಸ್ಟ್, ಖಾರದ ಪುಡಿಯನ್ನು ಹಾಕಿ ಸಣ್ಣ ಉರಿಯಲ್ಲಿ ಹತ್ತು ನಿಮಿಷ ಹುರಿದುಕೊಳ್ಳಿ. ನೀರಿನಾಂಶ ಹೋಗುವವರೆಗೂ ಒಲೆಯ ಮೇಲಿಟ್ಟು ಕೈಯಾಡಿಸಿ. ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಟ್ಟರೆ 15 ದಿನಗಳವರೆಗೂ ಬಳಸಬಹುದು.

Related Articles

Leave a Reply

Your email address will not be published. Required fields are marked *

Back to top button