ಕೆಜಿಎಫ್ 2 ಚಿತ್ರದ ಮತ್ತೊಂದು ಹಾಡು ರಿಲೀಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಇದೇ ಏಪ್ರಿಲ್ 14ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಇದೀಗ ಚಿತ್ರದ ಹಾಡೊಂದನ್ನ ಚಿತ್ರತಂಡ ಬಿಡುಗಡೆ ಮಾಡಿದೆ.
ಕೆಜಿಫ್ ಚಿತ್ರದ ತೂಫಾನ್ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.ಇದೀಗ ಚಿತ್ರತಂಡ ಗಗನ ನೀ ಹಾಡನ್ನ ಬಿಡುಗಡೆ ಮಾಡಿದೆ. ನಟಿ ಅರ್ಚನಾ ಜೋಯಿಸ್ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಕಥಾನಾಯಕನ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್ ಕೊನೆಯಲ್ಲಿ ಅಮ್ಮ-ಮಗನ ನಡುವೆ ನಡೆಯುವ ಸಂಭಾಷಣೆ ಕೂಡ ಹೈಲೈಟ್ ಆಗಿದೆ. ಈಗ ತಾಯಿ ಸೆಂಟಿಮೆಂಟ್ ಸಾಂಗ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಇರುವ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
‘ಗಗನ ನೀ..’ ಹಾಡಿಗೆ ಕಿನ್ನಲ್ ರಾಜ್ ಸಾಹಿತ್ಯ ಬರೆದಿದ್ದು, ಸುಚೇತಾ ಬಸ್ರೂರು ಕಂಠದಲ್ಲಿ ಈ ಎಮೋಷನಲ್ ಹಾಡು ಮೂಡಿಬಂದಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಹಾಡು ರಿಲೀಸ್ ಆಗಿದೆ.




