ಆರೋಗ್ಯಲೈಫ್ ಸ್ಟೈಲ್

ಅಧಿಕ ರಕ್ತದೊತ್ತಡ ಸಮಸ್ಯೆಗೆ ಸಂಬಂಧಪಟ್ಟ ಈ ವಿಚಾರಗಳನ್ನು ನಂಬಬೇಡಿ

  • – ಪವಿತ್ರಾ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬೇಕು. ಇಲ್ಲವಾದರೆ ಇದರಿಂದ ಅನೇಕ ಸಮಸ್ಯೆಗಳು ಕಾಡುತ್ತವೆ. ಆದರೆ ಈ ಅಧಿಕ ರಕ್ತದೊತ್ತಡಕ್ಕೆ ಸಂಬಂಧಪಟ್ಟ ಈ ವಿಚಾರಗಳನ್ನು ನಂಬಬೇಡಿ.

-ಅಧಿಕ ರಕ್ತದೊತ್ತಡ ಒಂದು ಗಂಭೀರ ಕಾಯಿಲೆ ಅಲ್ಲ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಇದು ತಪ್ಪು ಇದಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಇದರಿಂದ ಜೀವಕ್ಕೆ ಅಪಾಯ ಉಂಟಾಗುತ್ತದೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ಕಾಯಿಲೆ, ಹೃದಯ ವೈಫಲ್ಯ, ದೃಷ್ಟಿ ಸಮಸ್ಯೆ ಕಾಡುತ್ತದೆ.

-ಅಧಿಕ ರಕ್ತದೊತ್ತಡ ಅನುವಂಶಿಕವಾಗಿ ಕಾಡುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ಇದು ನಿಮ್ಮ ಕೆಟ್ಟ ಜೀವನಶೈಲಿಯಿಂದ ಉಂಟಾಗುತ್ತದೆ ಸರಿಯಾದ ಆಹಾರ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದ ಉಂಟಾಗುತ್ತದೆ.

-ಅಧಿಕ ರಕ್ತದೊತ್ತಡ ವಯಸ್ಸಾದವರಲ್ಲಿ ಕಂಡು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಇದು ವಯಸ್ಸಾದವರಲ್ಲಿ ಕಂಡುಬರುತ್ತದೆಯಾದರೂ ಇದು ಮಧ್ಯವಯಸ್ಕರು ಹಾಗೂ ಯುವಜನರಲ್ಲಿಯೂ ಕೂಡ ಕಂಡುಬರುತ್ತದೆ.

-ನೀವು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಅಧಿಕ ರಕ್ತದೊತ್ತಡ ಸಮಸ್ಯೆಗೆ ಒಳಗಾದವರಿಗೆ ಅವರಿಗೆ ಈ ಸಮಸ್ಯೆ ಇರುವುದೇ ತಿಳಿಯುವುದಿಲ್ಲ. ಹಾಗಾಗಿ ಇದನ್ನು ಪರೀಕ್ಷೆಯ ಮೂಲಕವೇ ತಿಳಿಯಬಹುದು.

  • ಅಧಿಕ ರಕ್ತದೊತ್ತಡವನ್ನು ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಇದನ್ನು ಆರೋಗ್ಯಕರ ಆಹಾರ ಸೇವಿಸುವ ಮೂಲಕ, ವ್ಯಾಯಾಮ ಮಾಡುವ ಮೂಲಕ ನಿಯಂತ್ರಿಸಬೇಕು.
Spread the love

Related Articles

Leave a Reply

Your email address will not be published. Required fields are marked *

Back to top button