ಕೆರೂರು ಕುರಿ ಸಂತೆಯಲ್ಲಿ ಜನವೋ ಜನ; ನಿಯಮ ಉಲ್ಲಂಘಿಸಿ ವಾರದ ಸಂತೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಕೆರೂರು ಕುರಿ ಸಂತೆಯಲ್ಲಿ ಸಾವಿರಾರು ಜನರು ಸೇರಿ ಕೊರೊನಾ ನಿಯಮ ಉಲ್ಲಂಘಿಸಿದರೂ ಅಧಿಕಾರಿಗಳು ಮಾತ್ರ ಕ್ರಮಕೈಗೊಳ್ಳದೇ ಕೈಕಟ್ಟಿ ಕುಳಿತುಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಕೊರೊನಾ ನಿಯಮ ಸಂಪೂರ್ಣ ಗಾಳಿಗೆ ತೂರಲಾಗಿದೆ. ಕೆರೂರ ಸಂತೆಯಲ್ಲಿ ಭಾರಿ ಜನಜಂಗುಳಿ ಸೇರಿದ್ದು,ಮಾಸ್ಕ್, ಸಾಮಾಜಿಕ ಅಂತರ ಇಲ್ಲವೇ ಇಲ್ಲ.ಕೊರೊನಾ ಬಗ್ಗೆ ಮುಂಜಾಗೃತ ಕ್ರಮಕೈಗೊಂಡಿಲ್ಲ.ಪಟ್ಟಣ ಪಂಚಾಯಿತಿ, ಪೊಲೀಸರು ಕಂಡು ಕಾಣದಂತೆ ಜಾಣಕುರುಡತನ ಪ್ರದರ್ಶನ ಮಾಡುತ್ತಿದ್ದಾರೆ.ಪ್ರತಿ ಮಂಗಳವಾರ ನಡೆಯುವ ಕೆರೂರ ಕುರಿ, ಹಾಗೂ ವಾರದ ಸಂತೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ.ಒಂದು ಲಕ್ಷಕ್ಕೂ ಅಧಿಕ ಕುರಿಗಳ ವ್ಯಾಪಾರ ವಹಿವಾಟು ನಡೆಯುತ್ತದೆ.
ಉತ್ತರ ಕರ್ನಾಟಕದ ಅತ್ಯಂತ ದೊಡ್ಡ ಕುರಿ ಸಂತೆ ಇದಾಗಿದೆ. ಅನ್ ಲಾಕ್ ಬಳಿಕ ಮೊದಲ ಸಲ ನಡೆಯುತ್ತಿರುವ ಕುರಿ ಸಂತೆಯಾಗಿದ್ದು.ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶಗಳಿಂದ ಖರೀದಿದಾರರು ಬರುತ್ತಾರೆ.ಆದರೆ ಕೋವಿಡ್ ಲಾಕ್ ಡೌನ್ ಸಡಿಲಿಕೆಯಲ್ಲಿ ವಾರದ ಸಂತೆಗೆ ಅವಕಾಶ ಕೊಟ್ಟಿಲ್ಲ.ಇತ್ತ ಕೆರೂರು ತರಕಾರಿ ಮಾರುಕಟ್ಟೆಯಲ್ಲಿ ಕೋವಿಡ್ ಲೆಕ್ಕಿಸದೇ ಖರೀದಿಯಲ್ಲಿ ಜನ ಬ್ಯೂಸಿಯಾಗಿದ್ದಾರೆ.ಮಾಸ್ಕ್ , ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ.




