ಆಹಾರಲೈಫ್ ಸ್ಟೈಲ್

ಯುಗಾದಿಗೆ ಮಾವಿನ ಹಣ್ಣಿನ ಪಾಯಸ ಮಾಡಿ ಸವಿಯಿರಿ

ಮಾವಿನ ಹಣ್ಣಿನ ಕಾಲ ಶುರುವಾಗಿದೆ. ತರಹೇವಾರಿ ಮಾವಿನ ಹಣ್ಣುಗಳು ಮಾರ್ಕೆಟ್ ನಲ್ಲಿ ಕಾಣ ಸಿಗುತ್ತವೆ. ಹಳದಿ ಬಣ್ಣದಿಂದ ಕೂಡಿದ ಮಾವಿನ ಹಣ್ಣುಗಳನ್ನ ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ. ಹಾಗಾದ್ರೆ ಈ ಮಾವಿನ ಹಣ್ಣಿನಿಂದ ಪಾಯಸ ಕೂಡ ಮಾಡಬಹುದು. ಅದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಕೆ ಈ ಲೇಖನ ಓದಿ
ಮಾವಿನ ಹಣ್ಣಿನ ಪಾಯಸ ಮಾಡೋಕೆ ಬೇಕಾಗುವ ಸಾಮಗ್ರಿಗಳು
ಮಾವಿನ ಹಣ್ಣು 2
ಶ್ಯಾವಿಗೆ 1 ಕಪ್
ಹಾಲು 1 ಲೀಟರ್
ತುಪ್ಪ 1 ಟೇಬಲ್ ಚಮಚ
ಏಲಕ್ಕಿ ಪುಡಿ 1/ ಟೀ ಚಮಚ
ಬಾದಾಮಿ, ಗೋಡಂಬಿ, ಪಿಸ್ತಾ, ದ್ರಾಕ್ಷಿ
ತಯಾರಿಸುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಬಾದಾಮಿ, ಗೋಡಾಂಬಿ ಹಾಗೂ ಪಿಸ್ತಾ ಹುರಿದುಕೊಂಡು ಬೇರೆ ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ. ನಂತರ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಶ್ಯಾವಿಗೆ ಯನ್ನ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ. ಒಂದು ಲೀಟರ್ ಹಾಲಿಗೆ ಸಕ್ಕರೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ, ಬಳಿಕ ಹುರಿದ ಶ್ಯಾವಿಗೆಗೆ ಕಾಯಿಸಿದ ಹಾಲನ್ನ ಹಾಕಿ ಬೇಯಲು ಬಿಡಿ.
ಮಾವಿನ ಹಣ್ಣನ್ನು ಸಿಪ್ಪೆ ಬಿಡಿಸಿಕೊಂಡು ಮಿಕ್ಸಿಯಲ್ಲಿ ಒಂದು ರೌಂಡ್ ರುಬ್ಬಿಕೊಳ್ಳಿ. ಶ್ಯಾವಿಗೆ ಪಾಯಸ ತಣ್ಣಗಾದ ಬಳಿಕ ಮಾವಿನ ಹಣ್ಣಿನ ಗಟ್ಟಿ ರಸವನ್ನ ಸೇರಿಸಿ ಮಿಶ್ರಣ ಮಾಡಿ. ಬಳಿಕ ಪಾಯಸದ ಮೇಲೆ ಮಾವಿನ ಹೋಳುಗಳು, ಬಾದಾಮಿ, ಪಿಸ್ತಾ, ದ್ರಾಕ್ಷಿ, ಗೋಡಂಬಿ ಹಾಕಿ ಅಲಂಕರಿಸಿ ಸರ್ವ್ ಮಾಡಿ.

Spread the love

Related Articles

Leave a Reply

Your email address will not be published. Required fields are marked *

Back to top button