ಆರೋಗ್ಯಲೈಫ್ ಸ್ಟೈಲ್

ಸರ್ವರೋಗ ನಿವಾರಿಣಿ ಈ ಉತ್ತರಾಣಿ

ನಮ್ಮ ಪ್ರಕೃತಿಯಲ್ಲಿ ದೊರೆಯುವ ಒಂದೊಂದು ಗಿಡ ಮರ, ಬಳ್ಳಿಗಳು ಮನುಷ್ಯನಿಗೆ ಬೇಕಾಗುವ ಅದ್ಭುತವಾದ ಉಡುಗೊರೆ ಹಾಗೂ ವರದಾನವಾಗಿದೆ. ಅಂತಹ ಸಸ್ಯಗಳಲ್ಲಿ ಉತ್ತರಾಣಿ ಗಿಡ ಕೂಡ ಒಂದು.

ಉತ್ತರಾಣಿ ಗಿಡ ಸಾಮಾನ್ಯವಾಗಿ ಹೊಲ ಗದ್ದೆ ಪಾಳು ಬಿದ್ದ ಮನೆಗಳಲ್ಲಿ ಕಾಣ ಸಿಗುತ್ತದೆ. ಇದು ಎಲ್ಲ ಕಡೆಗೂ ಬೆಳೆಯುವ ಸಸ್ಯ. ಯಾವುದೇ ಬೇಧಭಾವ ಇಲ್ಲದೆ ಬಂಜರ ಭೂಮಿಯಲ್ಲಿ, ಬೆಟ್ಟ ಕಣಿವೆಯಲ್ಲಿ ಬೆಳೆಯುತ್ತದೆ.

ಉತ್ತರಾಣಿ ಗಿಡದಲ್ಲಿ ಎರಡು ವಿಧಗಳಿವೆ. ಒಂದು ಬಿಳಿ ಕಾಂಡ ಮತ್ತೊಂದು ಕೆಂಪು ಕಾಂಡ. ಸಾಮಾನ್ಯವಾಗಿ ಎಲ್ಲ ಪ್ರದೇಶದಲ್ಲಿ ಸಿಗುವ ಉತ್ತಾರಾಣಿ ಗಿಡದ ಪ್ರತಿಯೊಂದು ಭಾಗವು ಎಲ್ಲ ಬಗೆಯ ರೋಗಗಳಿಗೆ ದಿವ್ಯ ಔಷಧ ಅಂತನೇ ಹೇಳಬಹುದು.

ಉತ್ತರಾಣಿ ಗೀಡದ ಉಪಯೋಗಗಳು ಈ ಕೆಳಗಿನಂತಿದೆ.

ಉತ್ತರಾಣಿ ಗಿಡದ ಬೇರು ತುಂಬಾನೇ ಉಪಯುಕ್ತ. ಹೀಗಾಗಿ ಅದರ ಬೇರನ್ನು ಜಜ್ಜಿ ಅದರ ರಸವನ್ನು ತೆಗೆದು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ನಿದ್ರಾ ಹೀನತೆ ಸಮಸ್ಯೆ ಮಾಯವಾಗುತ್ತದೆ.

ಉತ್ತರಾಣಿ ಎಲೆಯ ರಸವು ಮೂತ್ರಪಿಂಡವನ್ನು ಶುದ್ಧಗೊಳಿಸುವುದರ ಜೊತೆಗೆ ಮೂತ್ರವಿಸರ್ಜನೆಯನ್ನು ಸುಲಭಗೊಳಿಸುತ್ತದೆ. ಆದ್ದರಿಂದ ಇದರ ರಸವನ್ನು ಯಾವುದೋ ಒಂದು ರೀತಿಯಲ್ಲಿ ಸೇವನೆ ಮಾಡಿ.

ಇನ್ನೂ ಜೇನು ಹುಳುಗಳು ನಿಮಗೆ ಕಚ್ಚಿದರೆ ಹಾವು ಮತ್ತು ಚೇಳುಗಳಿಂದ ಕಚ್ಚಿಸಿಕೊಂಡವರಿಗೆ ಪ್ರಥಮ ಚಿಕಿತ್ಸೆಯಾಗಿ ಉತ್ತರಾಣಿ ಬಳಸಲಾಗುತ್ತದೆ. ಉತ್ತಾರಾಣಿ ಗಿಡದ ಎಲೆಗಳನ್ನು ಜಜ್ಜಿ ಅದರ ಲೇಪನವನ್ನು ಗಾಯದ ಮೇಲೆ ಹಚ್ಚಿ ಇದರಿಂದ ಗಾಯವು ಉಪಶಮನ ಆಗುತ್ತದೆ. ಇದರಿಂದ ನೋವು ಮತ್ತು ಉರಿಯೂತ ಕಡಿಮೆಯಾಗುತ್ತದೆ ಹಾಗೂ ವಿಷದ ಅಂಶ ಇಳಿಯುತ್ತದೆ.

ಅಸ್ತಮಾದಿಂದ ಬಳಲುತ್ತಿರುವ ಜನರು ಉತ್ತರಾಣಿ ಬೇರಿನಿಂದ ಮಾಡಿದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರಿಸಿ ಕುಡಿಯುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ. ಇನ್ನೂ ಪೆಟ್ಟು ಬಿದ್ದು ಗಾಯ ಮಾಡಿಕೊಂಡರೆ ಹಾಗೂ ಅತಿಯಾದ ರಕ್ತಸ್ರಾವ ಆಗುತ್ತಿದ್ದಾರೆ ಕೆಂಪು ಉತ್ತರಾಣಿ ಗಿಡದ ರಸವನ್ನು ಗಾಯದ ಮೇಲೆ ಹಿಂಡಿದರೆ ಗಾಯವು ಕಡಿಮೆ ಆಗುತ್ತದೆ ಹಾಗೂ ರಕ್ತಸ್ರಾವ ನಿಲ್ಲುತ್ತದೆ.

ಕೆಂಪು ಉತ್ತರಾಯಿಣಿ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದರ ರಸವನ್ನು ಕುಡಿದರೆ ದೇಹದಿಂದ ರಕ್ತಸ್ರಾವ ಆಗುವುದು ತಡೆಯುತ್ತದೆ. ಹಾಗೂ ಕೆಂಪು ಕೂಡ ನಿವಾರಣೆ ಮಾಡುತ್ತದೆ. 

ಕೆಮ್ಮು ನಿವಾರಣೆ ಆಗಲು ಕೆಂಪು ಉತ್ತರಾಯಿನಿ ಒಣಗಿದ ಕಾಂಡವನ್ನು ಪುಡಿ ಮಾಡಿ ಅದರಲ್ಲಿ ಕರಿಮೆಣಸು ಪುಡಿ ಹಾಗೂ ಜೇನುತುಪ್ಪ ಹಾಕಿ ಸೇವನೆ ಮಾಡಿದರೆ ಕೆಮ್ಮು ನಿವಾರಣೆ ಆಗುತ್ತದೆ.

ಉತ್ತರಾಣಿ ಗಿಡದ ಪೇಸ್ಟ್ ನಲ್ಲಿ ಮೊಸರು ಹಾಕಿ ಸೇವನೆ ಮಾಡುವುದರಿಂದ ಭೇಧಿ ನಿಲ್ಲುತ್ತದೆ. ಸತತವಾಗಿ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದರೆ ಉತ್ತರಾಣಿ ಎಲೆಯನ್ನು ಕಷಾಯ ಮಾಡಿ ಸೇವಿಸಿ. ಇದು ಹುಣ್ಣಿನ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.

ಉತ್ತರಾಣಿ ಗಿಡದ ಎಲೆಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಚರ್ಮದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಈ ಗಿಡದ ಎಲೆಗಳನ್ನು ಬೆಲ್ಲದ ಜೊತೆಗೆ ತಿನ್ನುವುದರಿಂದ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ. ಉತ್ತರಾಣಿ ರಸವು ಕಫ, ದೇಹ ಉಬ್ಬುವುದು, ನೋವು, ತುರಿಕೆ ಮತ್ತು ಕುಷ್ಠರೋಗವನ್ನು ತಡೆಯುತ್ತದೆ. ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡರೆ, ಪುಡಿಮಾಡಿದ ಉತ್ತರಾಣಿ ಬೀಜಗಳು ಉತ್ತಮ ಔಷಧ.

Spread the love

Related Articles

Leave a Reply

Your email address will not be published. Required fields are marked *

Back to top button