ಅಲ್ಲು ಅರ್ಜುನ್ ಪುಷ್ಪರಾಜ್ ಆದ ಕಥೆ ಇದು

ಟಾಲಿವುಡ್ ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಂದ್ರೆ ಅದು ನಟ ಅಲ್ಲು ಅರ್ಜುನ್. ನೀವು ಸ್ಟೈಲಿಶ್ ಸ್ಟಾರ್ ಅಂತ ಗೂಗಲ್ ಮಾಡಿದ್ರು ಬರೋದು ಅಲ್ಲು ಅರ್ಜುನ್ ಮಾತ್ರವೇ. ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ಅಲ್ಲು ಅರ್ಜುನ್ ಪುಷ್ಪ ಸಿನಿಮಾಗದಲ್ಲಿ ಕಂಪ್ಲೀಟ್ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಗಂಗೋತ್ರಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಕೊಟ್ಟ ಅಲ್ಲು ಅರ್ಜುನ್ ಪ್ರತಿಯೊಂದು ಸಿನಿಮಾದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ಸಿನಿಮಾದಲ್ಲೂ ಡಿಫರೆಂಟ್ ಹೇರ್ ಸ್ಟೈಲ್, ಅದಕ್ಕೆ ತಕ್ಕಂತ ಕಾಸ್ಟ್ಯೂಮ್ ಜೊತೆಗೆ ವಾಕ್ ಸ್ಟೈಲ್ನಿಂದಲೇ ಕಾಣಿಸಿಕೊಂಡ ನಟ ಅಲ್ಲು ಅರ್ಜುನ್. ಸದಾ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಳ್ತಿದ್ದ ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ವಿಭಿನ್ನವಾಗಿ ಬಣ್ಣ ಹಚ್ಚಿದ್ದಾರೆ. ಸಾಕಷ್ಟು ಸಮಯ ಕನ್ನಡಿ ಮುಂದೆ ಕಳೆದು ಪುಷ್ಪರಾಜ್ ಆಗಿ ಬದಲಾಗಿದ್ದಾರೆ.
ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಹೇರ್ ಸ್ಟೈಲ್, ಕಾಸ್ಟ್ಯೂಮ್, ವಾಕಿಂಗ್ ಎಲ್ಲವೂ ಟ್ರೆಂಡ್ ಕ್ರಿಯೇಟ್ ಮಾಡಿದೆ. ಅದ್ರಲ್ಲೂ ಅಲ್ಲು ಅರ್ಜುನ್ ವಾಕಿಂಗ್ ಸ್ಟೈಲ್ ದೇಶ ವಿದೇಶದಲ್ಲೂ ಫೇಮಸ್ ಆಗಿದ್ದು ಸಾಕಷ್ಟು ಮಂದಿ ರೀಲ್ ಮಾಡಿದ್ದಾರೆ. ಅಲ್ಲು ಅರ್ಜುನ್ ಪುಷ್ಪರಾಜ್ ಆಗಿ ಬದಲಾಗೋದು ಹೇಗೆ ಅನ್ನೋದರ ವಿಡಿಯೋ ಝಲಕ್ ಇಲ್ಲಿದೆ.




