ಆರೋಗ್ಯಲೈಫ್ ಸ್ಟೈಲ್

ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವುದು ಹೇಗೆ ?

ಇಂದಿನ ಆಹಾರ ಪದ್ದತಿಯಿಂದ ದೇಹದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಮುಳುವಾಗುತ್ತದೆಯೋ ಊಹಿಸಲು ಅಸಾಧ್ಯ. ನಾವು ಸೇವಿಸುವ ಪರಿಷ್ಕರಿಸಿದ ಕೊಬ್ಬಿನಿಂದಾಗಿ ನಮ್ಮ ದೇಹದಲ್ಲಿನ ಕೊಬ್ಬಿನ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ನಾವು ಅದನ್ನು ನಿಯಂತ್ರಿಸಿಕೊಳ್ಳಲೇಬೇಕು. ಇಲ್ಲವಾದರೆ ಈ ರೀತಿಯ ಕೊಬ್ಬು ಹೃದಯ ಸಂಬಂಧಿ ಕಾಯಿಲೆ ಕೊಲೆಸ್ಟ್ರಾಲ್, ಬೊಜ್ಜು, ಅಧಿಕ ತೂಕ ಮತ್ತು ಇನ್ನಿತರೆ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ಕೊಬ್ಬಿನಂಶವಿರುವ ಆಹಾರವನ್ನು ತಿನ್ನುವುದು ಮಿತಿ ಮೀರಿದರೆ ಮಾತ್ರ ಕಷ್ಟ. ಆಗ ಕೊಲೆಸ್ಟ್ರಾಲ್ ಹೆಚ್ಚಾಗುವುದು. ಅಷ್ಟು ಮಾತ್ರವಲ್ಲ ತುಂಬಾ ಹೊತ್ತು ಕೂತುಕೊಂಡು ಕೆಲಸ ಮಾಡುವುದರಿಂದಲೂ ಕೊಲೆಸ್ಟ್ರಾಲ್ ಹೆಚ್ಚಾಗುವುದು. ಹೀಗಾಗಿ ಕೊಲೆಸ್ಟ್ರಾಲ್ ನಿಯಂತ್ರಿಸಲು ಎಣ್ಣೆ, ತುಪ್ಪ, ವನಸ್ಪತಿ ಈ ರೀತಿಯ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು. ಅಲ್ಲದೆ ಸಂಸ್ಕರಿಸಿದ ಆಹಾರವನ್ನೂ ಬಳಸಬಾರದು.

ಗ್ರೀನ್ ಟೀ: ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದು ಕ್ಯಾಟೇಚಿನ್ ಮತ್ತು ಉತ್ತಮ ಅಂಶಗಳನ್ನು ಒಳಗೊಂಡಿದೆ. ಗ್ರೀನ್ ಟೀ ಕುಡಿಯುವುದರಿಂದ ಎಚ್ಡಿಎಲ್ ಮತ್ತು ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಓಟ್ಸ್ ಶೇಕ್: ಓಟ್ಸ್ ಆರೋಗ್ಯಕರ ಆಹಾರವಾಗಿದ್ದು, ಇದರಲ್ಲಿ ಬೀಟಾ ಗ್ಲುಕನ್‌ಗಳು ಕಂಡುಬರುತ್ತವೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಪ್ರತಿದಿನ ಓಟ್ಸ್ ಪಾನೀಯಗಳನ್ನು ಕುಡಿಯಿರಿ.

ಬಾದಾಮಿ: ಬಾದಾಮಿ ಮತ್ತು ಇತರ ಒಣ ಬೀಜಗಳು ಕೊಲೆಸ್ಟ್ರಾಲ್‍ಗಳ ಸುಧಾರಣೆಗೆ ಹಾಗೂ ಆರೋಗ್ಯದಲ್ಲಿ ಕೊಬ್ಬಿನ ಪ್ರಮಾಣವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುವುದು.

ಬೆರ್ರಿ ಹಣ್ಣಿ ಮಿಲ್ಕ್ ಶೇಕ್: ಆಂಟಿ ಆಕ್ಸಿಡೆಂಟ್‌ಗಳು ಮತ್ತು ಫೈಬರ್ ಬೆರ್ರಿ ಹಣ್ಣಿನ ಮಿಲ್ಕ್ ಶೇಕ್ ನಲ್ಲಿ ಕಂಡುಬರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಪಾನೀಯಗಳು ಆರೋಗ್ಯಕರ ಮತ್ತು ಸೇವಿಸಲು ಕೂಡ ರುಚಿಯಾಗಿರುತ್ತದೆ.

ಟೊಮೇಟೊ ರಸ: ಟಮೋಟದಲ್ಲಿ ಉತ್ತಮ ಪ್ರಮಾಣದ ಲೈಕೋಪಿನ್ ಇದೆ, ಇದು ಉತ್ಕರ್ಷಣ ನಿರೋಧಕವಾಗಿದ್ದು, ಇದು ಜೀವಕೋಶದ ಹಾನಿಯನ್ನು ರಕ್ಷಿಸುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button