
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 26 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ಸುದೀಪ್ ಗೆ ಸಖತ್ ಗಿಫ್ಟ್ ಕೊಟ್ಟಿದ್ದಾರೆ. ಜನವರಿ 31 ರಂದು ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 26 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಕುಟುಂಬ ಸದಸ್ಯರು, ಸ್ನೇಹಿತರು ವಿಶ್ ಮಾಡಿದ್ದರು.

ಸುದೀಪ್ ಮಡದಿ ಪ್ರಿಯಾ ಕೂಡ ವಿಶ್ ಮಾಡಿದ್ದಾರೆ. ಕಳೆದ ಬಾರಿ ಸುದೀಪ್ 25 ವರ್ಷದ ಸಿನಿ ಜರ್ನಿ ಮುಗಿಸಿದ ಹಿನ್ನೆಲೆಯಲ್ಲಿ ಬುರ್ಜ್ ಖಲೀಫಾದಲ್ಲಿ ಸಂಭ್ರಮ ಆಚರಿಸಿಕೊಂಡಿದ್ದ ಫೋಟೋವನ್ನು ಸುದೀಪ್ ಪತ್ನಿ ಹಂಚಿಕೊಂಡು ವಿಶ್ ಮಾಡಿದ್ದಾರೆ. ಇದೀಗ ಕಿಚ್ಚನ ಮಹಿಳಾ ಅಭಿಮಾನಿಯೊಬ್ಬರು ಅವರಿಗೆ ಉಡುಗೊರೆಯನ್ನು ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಅಭಿನಯಿಸಿದ ಎಲ್ಲ ಸಿನಿಮಾಗಳ ಫೋಟೊಗಳನ್ನು ಒಂದು ಬಾಕ್ಸ್ ನಲ್ಲಿರಿಸಿ ಅದಕ್ಕೆ ಲೈಟಿಂಗ್ ನಿಂದ ಅಲಂಕರಿಸಿದ್ದಾರೆ. ಕಿಚ್ಚ ಸುದೀಪ್ ಗಿಫ್ಟ್ ಬಾಕ್ಸ್ ಓಪನ್ ಮಾಡುವಾಗ ತಮ್ಮ ಎಲ್ಲ ಫೋಟೋ ನೋಡಿ ಸಂತಸ ವ್ಯಕ್ತಪಡಿಸಿದರು. ಇನ್ನು ಈ ಗಿಫ್ಟ್ ನೋಡಿ ಸುದೀಪ್ ಫುಲ್ ಖುಷ್ ಆಗಿದ್ದಾರೆ. ಇದೀಗ ಈ ಗಿಫ್ಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.




