Breaking NewsLatestಉಡುಪಿಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಹಿಜಾಬ್ ನಿಷೇಧ: ಮುಸ್ಲಿಮರನ್ನು ಗುರಿಯಾಗಿಸುವುದೇ ಉದ್ದೇಶ: ಕಾರ್ತಿ ಚಿದಂಬರಂ

ನವದೆಹಲಿ: ಕೆಲ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುತ್ತಿರುವುದು ವಸ್ತ್ರಗಳ ಏಕರೂಪತೆ ಜಾರಿಗೊಳಿಸಲು ಅಲ್ಲ. ಬದಲಾಗಿ ಇಸ್ಲಾಂ ನಲ್ಲಿ ನಂಬಿಕೆ ಹೊಂದಿರುವ ಜನರು (ಮುಸ್ಲಿಮರು) ಯಾವುದೋ ಒಂದು ನೆಪದಲ್ಲಿ ಗುರಿಯಾಗುತ್ತಾರೆ ಎಂಬ ಸ್ಪಷ್ಟ ಸಂಕೇತ ರವಾನಿಸುವುದೇ ಇದರ ಹಿಂದಿನ ಉದ್ದೇಶ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿಖ್ ಶಿರಸ್ತ್ರಾಣದ ವಿರುದ್ಧ ಅದೇ ಕೆಲಸವನ್ನು ಮಾಡಲು ಯಾವುದೇ ಸಂಸ್ಥೆಗೆ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವ ಘಟನೆ ಹಿನ್ನೆಲೆಯಲ್ಲಿ ಕಾರ್ತಿ ಚಿದಂಬರಂ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button