Latestಜಿಲ್ಲಾ ಸುದ್ದಿದಾವಣಗೆರೆ

Viral Video : ಕೈಯಲ್ಲಿ ಮಚ್ಚು ಹಿಡಿದು ಯುವಕರ ಫೋಟೋಶೂಟ್

ದಾವಣಗೆರೆ : ಕೈಯಲ್ಲಿ ಮಚ್ಚು ಹಿಡಿದು ಯುವಕರ ಗುಂಪು ಫೋಟೋಶೂಟ್ ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ದಾವಣಗೆರೆ ತಾಲೂಕಿನ ದೇವರಬೆಳಕೆರೆ ಡ್ಯಾಂ ಬಳಿ ಈ ಶೂಟ್ ನಡೆಸಲಾಗಿದೆ.

ಕೈಯಲ್ಲಿ ಮಚ್ಚು ಹಿಡಿದ ಕಾರಣ ರಸ್ತೆಯಲ್ಲಿ ಓಡಾಡೋರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಈ ಯುವಕರ ಹುಚ್ಚಾಟಕ್ಕೆ ಜನರು ಹೆದರುವಂಥ ಸ್ಥಿತಿ ನಿರ್ಮಾಣ ಆಗಿತ್ತು.

ದೇವರ ಬೆಳಕೆರೆ ಡ್ಯಾಮ್ ನ ಬ್ರಿಡ್ಜ್ ಮೇಲೆ ತಲವಾರ್ ಹಿಡಿದು ಯುವಕರ ಹುಚ್ಚಾಟ ಮಾಡಿದ್ದು, ಮಲೇಬೆನ್ನೂರು – ದಾವಣಗೆರೆ ರಸ್ತೆಯಲ್ಲಿ ತಲವಾರ್ ಹಿಡಿದು ವಿಡಿಯೋ ಚಿತ್ರೀಕರಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button