Breaking NewsLatestಮೆಟ್ರೋರಾಜಕೀಯರಾಜ್ಯಸುದ್ದಿ

ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕರಾಗಿ ಬಿ ಕೆ ಹರಿಪ್ರಸಾದ್ ನೇಮಕ

ನವದೆಹಲಿ : ವಿಧಾನ ಪರಿಷತ್​​ ವಿರೋಧ ಪಕ್ಷದ ನಾಯಕರಾಗಿ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್​ ಅವರನ್ನು ಎಐಸಿಸಿ ನೇಮಕ ಮಾಡಿದೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ ಆದೇಶಿಸಿದ್ದಾರೆ.

ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕರಾಗಿ ಕೆ.ಗೋವಿಂದರಾಜ್ ಹಾಗೂ ಮುಖ್ಯ ಸಚೇತಕರಾಗಿ ಪ್ರಕಾಶ್​​ ರಾಥೋಡ್ ಅವರನ್ನು ನೇಮಕ ಮಾಡಿದ್ದಾರೆ.

ಇದರ ಜೊತೆ ಮುಂಬರುವ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಪದವೀಧರ ಕ್ಷೇತ್ರದಿಂದ ಮಧು ಜಿ.ಮಾದೇಗೌಡ ಹಾಗೂ ಶಿಕ್ಷಕ ಕ್ಷೇತ್ರದಿಂದ ಬಸವರಾಜು ಗುರಿಕಾರ ಅವರ ಹೆಸರನ್ನು ಅಂತಿಮ ಮಾಡಿ ಆದೇಶಿಸಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button