Latestಮನರಂಜನೆಸಿನಿಮಾಸೆಲೆಬ್ರಿಟಿ

ಅಭಿಮಾನಿಗಳಿಗೆ ಶಿವಣ್ಣನ ಕೈ ತುತ್ತು

ಸರಳತೆಗೆ ಮತ್ತೊಂದು ಹೆಸರೆ ದೊಡ್ಮನೆ ಕುಟುಂಬ. ಡಾ.ರಾಜ್​ಕುಮಾರ್ ಕುಟುಂಬದಲ್ಲಿ ಘಟಾನುಘಟಿ ಸ್ಟಾರ್​ಗಳಿದ್ರು ಯಾವಾತ್ತು ಯಾವ ಕಲಾವಿಧರು ಸ್ಟಾರ್ ಎಂಬ ಪಟ್ಟ ಕಟ್ಟಿಕೊಂಡು ಮೆರೆದವರಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯೋ ದೊಡ್ಮನೆ ಕುಟುಂಬದವ್ರ ಸರಳತೆ ಶಿವಣ್ಣನ ಮೂಲಕ ಮತ್ತೊಮ್ಮೆ ಪ್ರೂವ್ ಆಗಿದೆ.

ಹ್ಯಾಟ್ರಿಕ್ ಹಿರೋ, ಸೆಂಚುರಿ ಸ್ಟಾರ್, ಅಭಿಮಾನಿಗಳ ದೇವರು ಹೀಗೆ ನಾನಾ ಹೆಸರುಗಳಿಗೆ ಕರೆಯೋ ಶಿವರಾಜ್​ ಕುಮಾರ್ ಸ್ಯಾಂಡಲ್​ವುಡ್​ನ ಸೂಪರ್ ಸ್ಟಾರ್ ಆಗಿದ್ರು ಯಾವತ್ತು ಸರಳತೆ ಮರೆತಿಲ್ಲ. ತಂದೆಯಿಂದ ಬಂದ ಸರಳತೆಯ ಗುಣವೇ ಅವ್ರ ಮಕ್ಕಳಲ್ಲೂ ಬೆರೆತಿದ್ದು ಅದನ್ನ ಇಂದಿಗೂ ಪಾಲಿಸಿಕೊಂಡು ಬರ್ತಿದ್ದಾರೆ.

ಸಿಂಪ್ಲಿಸಿಟಿ ವಿಚಾರದಲ್ಲಿ ಶಿವರಾಜ್​ ಕುಮಾರ್ ಎಂದಿಗೂ ಒಂದು ಕೈ ಮೇಲೆ. ಅಭಿಮಾನಿಗಳ ಜೊತೆ ಆಪ್ತತೆಯಿಂದ ಬೆರೆಯೋ ಶಿವಣ್ಣ ಇತ್ತೀಚೆಗೆ ಮೈಸೂರಿನಲ್ಲಿ ಹೋಟೆಲ್ ಒಂದರ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಹೋಟೆಲ್​ನಲ್ಲಿ ಊಟ ಮಾಡಿ ಜೊತೆಯಲ್ಲಿದ್ದ ಅಭಿಮಾನಿಗಳಿಗೆ ಕೈ ತುತ್ತು ತಿನಿಸಿದ್ದಾರೆ.

ಹ್ಯಾಟ್ರಿಕ್ ಹಿರೋ ತೋರಿದ ಪ್ರೀತಿ, ಕಾಳಜಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಬಳಿಕ ಶಿವಣ್ಣನ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಗಣರಾಜ್ಯೋತ್ಸವದ ಪ್ರಯುಕ್ತ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವಣ್ಣ ಅಲ್ಲಿನ ಮಕ್ಕಳಿಗೆ ಸಿಹಿ ತಿನಿಸಿ ಅವರ ಜೊತೆ ಜಾಲಿ ರೈಡ್ ಹೋಗಿದ್ದರು.

ತಂದೆಯ ಸ್ಥಾನದಲ್ಲಿ ನಿಂತಿರುವ ಶಿವಣ್ಣ ಶಕ್ತಿಧಾಮದ ಸಾವಿರಾರು ಮಕ್ಕಳ ಭಾಳಿಗೆ ಬೆಳಕಾಗಿದ್ದಾರೆ. ದೊಡ್ಮನೆ ಕುಟುಂಬದ ಸರಳತೆ ಹೀಗೆ ಮುಂದುವರೆಯಲಿ ಅಂತಿದ್ದಾರೆ ಅವ್ರ ಅಭಿಮಾನಿಗಳು.

Spread the love

Related Articles

Leave a Reply

Your email address will not be published. Required fields are marked *

Back to top button