ಅನಾನಸ್ ನಲ್ಲಿ ಅಡಗಿದೆ ಹಲವು ಪ್ರಯೋಜನೆಗಳು…ಇಲ್ಲಿವೆ?

ಪ್ರತಿಯೊಬ್ಬರು ಬೆಳೆಯುವಂತ ಹಣ್ಣು ಅಂದರೆ ಅನಾನಸ್. ಇದು ಮಲೆನಾಡು ಭಾಗಗಳಲ್ಲಿ ಅತೀ ಹೆಚ್ಚಾಗಿ ಬೆಳೆಯುವ ತಳಿ ಇದಾಗಿದೆ. ಇದರಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್ ಅಂಶವನ್ನು ಅಡಗಿರುತ್ತದೆ.
ಇದು ಆ್ಯಂಟಿ ಆಕ್ಸಿಡೆಂಟ್‌ಗಳಾದ ಫ್ಲೇವನಾಯ್ಡ್ಸ್ ಮತ್ತು ಫೇನೋಲಿಕ್ ಆ್ಯಸಿಡ್‌ಗಳನ್ನು ಹೊಂದಿದೆ.ಇದರಲ್ಲಿ ಜೀರೋ ಕೊಲೆಸ್ಟ್ರಾಲ್, ವಿಟಮಿನ್ ಎ, ಬಿ, ಸಿ, ಪೊಟಾಷ್ಯಿಯಂ, ಮ್ಯಾಂಗನೀಸ್, ಸತು ಹಾಗೂ ದೇಹಕ್ಕೆ ಅಗ್ಯತವಾದ ಇತರ ಖನಿಜಾಂಶಗಳಿದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನೆಯನ್ನು ಪಡೆಯಬಹುದಾಗಿದೆ. ಈ ಕೆಳಗಿನಂತಿವೆ.
ರೋಗ ನಿರೋಧಕ ಶಕ್ತಿ ಹೆಚ್ಚಳ:
ಆ್ಯಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಅನಾನಸು ಹೊಂದಿದೆ. ಅನಾನಸು ದೀರ್ಘಾವದಿಯ ಪರಿಣಾಮ ನಿವಾರಿಸುತ್ತದೆ. ಇದರಲ್ಲಿರುವ ರೋಗ ನಿರೋಧಕ ಗುಣಗಳು ಡಯಾಬಿಟೀಸ್ ಮತ್ತು ಹೃದಯ ಸಂಬಂಧಿ ರೋಗಗಳನ್ನು ಸಾಧ್ಯತೆ ಕಡಿಮೆ ಮಾಡುತ್ತದೆ.
ಕಣ್ಣಿನ ಆರೋಗ್ಯಕ್ಕೆ ಸಹಕಾರಿ:
ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್‌ಗಳು, ಮಿನರಲ್‌ಗಳಾದ ಪೋಟ್ಯಾಸಿಯಂ ಮತ್ತು ಮ್ಯಾಂಗನೀಸ್‌ಗಳಿಂದ ಅನಾನಸು ಅಂಶವಿರುತ್ತದೆ. ಹಣ್ಣಿನಲ್ಲಿರುವ ಬೀಟಾ-ಕ್ಯಾರೊಟಿನ್ ಅಂಶಗಳು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕರಿಯಅಗುತ್ತದೆ.
ಹಲ್ಲುಗಳಿಗೆ ಶಕ್ತಿ ನೀಡುತ್ತದೆ:
ಅನಾನಸ್ ಸೇವಿಸುವುದರಿಂದ ನಮ್ಮ ಹಲ್ಲು ಮತ್ತು ಒಸಡುಗಳು ಗಟ್ಟಿಯಾಗುತ್ತವೆ. ನಮ್ಮ ಹಲ್ಲು ಮತ್ತು ಮೂಳೆಗಳು ಕ್ಯಾಲ್ಸಿಯಂನಿಂದ ರೂಪಗೊಂಡಿದೆ.
ಮೊಡವೆ ನಿವಾರಣೆ ಸಹಕಾರಿ:
ಅನಾನಸ್ ತ್ವಚೆ ಆರೋಗ್ಯವನ್ನು ಹೆಚ್ಚಿಸುತ್ತದೆ, ಇನ್ನು ಇದನ್ನು ಫೇಶಿಯಲ್ ಮಾಸ್ಕ್ ಆಗಿಯೂ ಬಳಸಬಹುದು. ಒಂದು ತುಂಡು ಅನಾನಸ್ ತೆಗೆದುಕೊಂಡು ಅದರ ರಸವನ್ನು ಮುಖಕ್ಕೆ ಹಚ್ಚಿ, ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖ ಕಾಂತಿ ಹೆಚ್ಚುವುದು.
ಅಸ್ತಮಾ ಕಡಿಮೆಗೊಳಿಸಲು ಸಹಾಯ
ಅನಾನಸ್‌ನಲ್ಲಿ ಬೀಟಾ ಕೆರೋಟಿನ್ ಇದ್ದು, ಇದು ಅಸ್ತಮಾ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ದೂಳು, ಪೋಷಕಾಂಶ ಕೊರತೆ, ಮಾನಸಿಕ ಒತ್ತಡದಿಂದ ಸಮಸ್ಯೆ ಹೆಚ್ಚಾಗುತ್ತದೆ.
ತಲೆ ಹೊಟ್ಟು ನಿವಾರಿಸುತ್ತದೆ:
ಮಾಲಿನ್ಯದಿಂದಾಗಿ ಉಂಟಾಗುವ ತಲೆಹೊಟ್ಟನ್ನು ಅನಾನಸಸ್‍ನಲ್ಲಿರುವ ವಿಟಮಿನ್ ಸಿ ಸತ್ವ ನಿವಾರಿಸುತ್ತದೆ. ತಲೆ ಕೂದಲಿನ ಬುಡದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಕಾಪಾಡುತ್ತದೆ.




