Latestಟಿವಿಸಿನಿಮಾಸೆಲೆಬ್ರಿಟಿ

ಜೇಮ್ಸ್ ಚಿತ್ರದ ಟ್ರೈಲರ್ ರಿಲೀಸ್ ಆಗಲ್ವಂತೆ? ಬೇಸರಗೊಂಡ್ರು ಅಪ್ಪು ಫ್ಯಾನ್ಸ್

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಅಪ್ಪು ನಟನೆಯ ಕೊನೆಯ ಸಿನಿಮಾವಾಗಿರೋ ಜೇಮ್ಸ್ ಕಣ್ಮುಂಬಿಕೊಳ್ಳೋಕೆ ಅಭಿಮಾನಿಗಳು ಕಾಯ್ತಿದ್ದಾರೆ. ಇದೀಗ ಚಿತ್ರತಂಡ ಬೇಸರದ ಜೊತೆಗೆ ಸಂತೋಷದ ಸುದ್ದಿಯೊಂದನ್ನ ಅಪ್ಪು ಅಭಿಮಾನಿಗಳಿಗೆ ನೀಡಿದೆ.

ಚೇತನ್ ಕುಮಾರ್ ನಿರ್ದೇಶನದ ಪುನೀತ್ ರಾಜ್​ಕುಮಾರ್ ನಟನೆಯ ಜೇಮ್ಸ್ ಚಿತ್ರ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ. ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ರಿಲೀಸ್ ಆಗಲಿದೆ ಅನ್ನೋ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಚಿತ್ರತಂಡ ಮಾತ್ರ ಇದ್ರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿರೋ ಪೋಸ್ಟರ್​ನಲ್ಲಿಯೂ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೊದನ್ನ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಸಿನಿಮಾ ನೋಡೋಕೆ ಕಾದು ಕೂತಿರೋ ಅಭಿಮಾನಿಗಳು ಅಟ್​ಲೀಸ್ಟ್ ಟ್ರೈಲರ್ ಅಥವಾ ಟೀಸರ್ ಆದ್ರೂ ರಿಲೀಸ್ ಆಗಲಿ. ಆ ಮೂಲಕವಾದ್ರು ನಮ್ಮ ನೆಚ್ಚಿನ ನಟನನ್ನ ನೋಡಿ ಕಣ್ಮುಂಬಿಕೊಳ್ತಿವಿ ಅಂತಿದ್ದಾರೆ. ಆದ್ರೆ ಚಿತ್ರತಂಡ ಮಾತ್ರ ಅದಕ್ಕೂ ನೋ ಅಂದಿದ್ಯಂತೆ. ಚಿತ್ರವನ್ನ ನೇರವಾಗಿಯೇ ಥಿಯೇಟರ್​ನಲ್ಲಿ ರಿಲೀಸ್ ಮಾಡ್ತಿವಿ. ಅಲ್ಲೇ ಅಪ್ಪು ನಟನೆಯನ್ನ ಕಣ್ಮುಂಬಿಕೊಳ್ಳಿ, ಟ್ರೈಲರ್ ಟೀಸರ್ ರಿಲೀಸ್ ಮಾಡಲ್ಲ ಅಂತಿದ್ದಾರಂತೆ.

ಜೇಮ್ಸ್ ಚಿತ್ರವನ್ನ ಪುನೀತ್ ಅವರ ಹುಟ್ಟುಹಬ್ಬದ ದಿನವೇ ರಿಲೀಸ್ ಮಾಡಬೇಕು ಎಂದು ಚಿತ್ರತಂಡ ಫುಲ್ ಟೈಮ್ ವರ್ಕ್ ಮಾಡ್ತಿದೆಯಂತೆ. ಕೆಲವು ದಿನಗಳ ಹಿಂದಷ್ಟೇ ಚಿತ್ರದ ಪ್ಯಾಚ್​ ವರ್ಕ್ ಕೆಲಸಗಳು ಮುಗಿದಿದ್ದು ಕಲರಿಂಗ್ ಕೆಲಸಗಳು ನಡೆಯುತ್ತಿದೆಯಂತೆ. ಆದ್ರೆ ಟ್ರೈಲರ್, ಟೀಸರ್ ಬಗ್ಗೆಯಾಗಲಿ, ಸಿನಿಮಾ ರಿಲೀಸ್ ಕುರಿತಾಗಿ ಆಗಲಿ ಚಿತ್ರತಂಡದಿಂದ ಮಾತ್ರ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button