ಮನರಂಜನೆಸಿನಿಮಾಸೆಲೆಬ್ರಿಟಿ

ರಾಧಿಕಾಳ ಮೊಬೈಲ್​ನಲ್ಲಿದೆ ಯಶ್​ ಡಿಫರೆಂಟ್ ನೇಮ್

ಸೆಲೆಬ್ರಿಟಿಗಳ ಫರ್ಸನಲ್ ಲೈಫ್ ಹೇಗಿರುತ್ತೆ. ಅವರು ಮನೆಯಲ್ಲಿ ಯಾವ ರೀತಿ ಇರ್ತಾರೆ? ಫ್ಯಾಮಿಲಿ ಜೊತೆ ಹೇಗೆ ಟೈಮ್ ಸ್ಪೆಂಟ್ ಮಾಡ್ತಾರೆ. ತಮ್ಮ ಪ್ರೀತಿ ಪಾತ್ರರನ್ನ ಯಾವ ರೀತಿ ಕರೆಯುತ್ತಾರೆ. ಮೊಬೈಲ್​ನಲ್ಲಿ ತಮ್ಮ ಹತ್ತಿರದವ್ರ ಹೆಸರನ್ನ ಏನೆಂದು ಸೇವ್ ಮಾಡಿಕೊಂಡಿದ್ದಾರೆ ಅನ್ನೋ ಕುತೂಹಲ ಅವ್ರ ಅಭಿಮಾನಿಗಳಿಗೆ ಇದ್ದೆ ಇರುತ್ತೆ. ಇದೀಗ ಅಂತದ್ದೆ ಇಂಟ್ರೆಸ್ಟಿಂಗ್ ಮಾಹಿತಿಯೊಂದನ್ನ ನಟಿ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಪ್ರೀತಿಸಿ ಮದುವೆಯಾದ ಜೋಡಿಗಳು. ಆದ್ರೆ ಅದೆಷ್ಟೋ ವರ್ಷಗಳವರೆಗೆ ಈ ಜೋಡಿಯ ಮಧ್ಯೆ ಪ್ರೀತಿ ಹುಟ್ಟಿಕೊಂಡಿದೆ ಅನ್ನೋದು ಗೊತ್ತೆ ಇರಲಿಲ್ಲ. ಇದು ಗೊತ್ತಾಗಬಾರದು ಅನ್ನೋ ಕಾರಣಕ್ಕೆ ರಾಧಿಕಾ ಯಶ್ ಅವರ ಹೆಸರನ್ನ ತಮ್ಮ ಮೊಬೈಲ್​ನಲ್ಲಿ ಡಿಫರೆಂಟ್ ಆಗಿ ಸೇವ್ ಮಾಡಿಕೊಂಡಿದ್ದಾರಂತೆ. ಅಂದ್ಹಾಗೆ ಅಂದು ಸೇವ್ ಮಾಡಿದ ಹೆಸರೇ ಇಂದಿಗೂ ಇದ್ದು ನಾನು ಆ ಹೆಸರನ್ನು ಇಂದಿಗೂ ಬದಲಾಯಿಸಿಲ್ಲ ಎಂದಿದ್ದಾರೆ.

ಯಶ್ ಹೆಸರನ್ನ ರಾಧಿಕಾ ಪಂಡಿತ್ ತಮ್ಮ ಮೊಬೈಲ್​ನಲ್ಲಿ ಡೊಲ್ಲಾ ಎಂದು ಸೇವ್ ಮಾಡಿಕೊಂಡಿದ್ದಾರಂತೆ. ರಾಧಿಕಾ ಪಂಡಿತ್ ಕೊಂಕಣಿಯಾಗಿದ್ದು ಕೊಂಕಣಿಯಲ್ಲಿ ಡೊಲ್ಲಾ ಎಂದರೆ ಫ್ಯಾಟ್ ಎಂದು ಅರ್ಥ. ಅದೇ ರೀತಿ ಯಶ್ ಹೆಸರನ್ನ ಸೇವ್ ಮಾಡಿಕೊಂಡಿದ್ದಾಗಿ ರಾಧಿಕಾ ಹೇಳಿದ್ದಾರೆ.

ಎರಡು ಮುದ್ದಾದ ಮಕ್ಕಳ ತಾಯಿಯಾಗಿರೋ ರಾಧಿಕಾ ಅವರ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ರಾಧಿಕಾ ಮತ್ತೆ ಚಿತ್ರರಂಗಕ್ಕೆ ಮರಳಬೇಕು ಅನ್ನೋದು ಅವ್ರ ಅಭಿಮಾನಿಗಳ ಒತ್ತಾಯ. ಇತ್ತ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು ಈ ಸಿನಿಮಾಗಾಗಿ ಕೋಟ್ಯಾಂತರ ಅಭಿಮಾನಿಗಳು ಕಾದು ಕೂತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button