Breaking NewsLatestರಾಜಕೀಯರಾಷ್ಟ್ರೀಯಸುದ್ದಿ
ಬಿಜೆಪಿ ತ್ಯಜಿಸಿದ ಮತ್ತೊಬ್ಬ ಓಬಿಸಿ ಸಚಿವ ಧರಂಸಿಂಗ್ ಸೈನಿ

ಲಖ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಇನ್ನೊಂದು ವಿಕೆಟ್ ಬಿದ್ದಿದೆ. ಸಂಪುಟ ದರ್ಜೆ ಸಚಿವ ಹಾಗೂ ಓಬಿಸಿ ನಾಯಕ ಧರಂಸಿಂಗ್ ಸೈನಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸಂಪುಟದ ತ್ಯಜಿಸಿದ ಮೂರನೇ ಸಚಿವ ಹಾಗೂ 8ನೇ ಶಾಸಕರಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸೈನಿ , 2016ರಲ್ಲಿ ಮೊನ್ನೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಬಿಜೆಪಿ ಬಿಎಸ್ಪಿ ತ್ಯಜಿಸಿ ಬಿಜೆಪಿ ಸೇರಿದ್ದರು. ಬಿಜೆಪಿಯ ಇನ್ನಷ್ಟು ಶಾಸಕರು ಪಕ್ಷವನ್ನು ತೊರೆಯಲಿದ್ದಾರೆ ಎನ್ನಲಾಗಿದೆ.
ಮೊನ್ನೆ ಆದಿತ್ಯನಾಥ್ ಸಂಪುಟಕ್ಕೆ ರಾಜಿನಾಮೆ ಸಲ್ಲಿಸಿದ್ದ ಸ್ವಾಮಿ ಪ್ರಸಾದ್ ಶುಕ್ರವಾರ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ. ಅಂದೇ ಅವರು ತಮ್ಮ ಬೆಂಬಲಿಗ ಶಾಸಕ ಮತ್ತು ಮುಖಂಡರೊಂದಿಗೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
