ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಬುಲ್ ಬುಲ್ ಬೆಡಗಿ : ಕೊರೊನಾ ಮಧ್ಯೆ ಕೈ ಹಿಡಿತಾರ ಅಭಿಮಾನಿಗಳು

ಸ್ಯಾಂಡಲ್ವುಡ್ನಲ್ಲಿ ಸಖತ್ ಬ್ಯುಸಿಯಾಗಿರೋ ನಟಿ ರಚಿತಾ ರಾಮ್ ಇದೇ ಮೊದಲ ಭಾರಿಗೆ ಪರಭಾಷೆಗೂ ಎಂಟ್ರಿಕೊಟ್ಟಿದ್ದಾರೆ. ಒಂದರ ಹಿಂದೊದರಂತೆ ಸಿನಿಮಾಗಳನ್ನ ಒಪ್ಪಿಕೊಳ್ತಿರೋ ಡಿಂಪಲ್ ಕ್ವೀನ್ ನಟನೆಯ ತೆಲುಗಿನ ಸೂಪರ್ ಮಚ್ಚಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ರಚ್ಚು ಕಲ್ಯಾಣ್ ದೇವ್ ಜೋಡಿ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಬುಲ್ ಬುಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಚಿತಾ ರಾಮ್ ಕನ್ನಡದ ಸೂಪರ್ ಸ್ಟಾರ್ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋನಲ್ಲೂ ಬ್ಯುಸಿಯಾಗಿರೋ ರಚ್ಚು ತೆಲುಗಿಗೂ ಎಂಟ್ರಿಕೊಟ್ಟಿದ್ದು ರಚಿತಾ ರಾಮ್ ನಟನೆಯ ಸೂಪರ್ ಮಚ್ಚಿ ಚಿತ್ರ ಇದೇ ಜನವರಿ 14ರಂದು ರಿಲೀಸ್ ಆಗ್ತಿದೆ.
ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದಿದ್ದು ರಚಿತಾ ರಾಮ್ ಹಾಗೂ ಕಲ್ಯಾಣ್ ದೇವ್ ಜೋಡಿಯನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕೋವಿಡ್ನಿಂದಾಗಿ ವೀಕೆಂಟ್ ಕರ್ಪ್ಯೂ ಇದ್ದು ಚಿತ್ರಮಂದಿರಗಳಲ್ಲಿ ಶೇ 50 ಆಸನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಿದ್ದರು ಸಿನಿಮಾ ರಿಲೀಸ್ ಮಾಡೋಕೆ ಚಿತ್ರತಂಡ ಮುಂದಾಗಿದ್ದು ಅಚ್ಚರಿ ಮೂಡಿಸಿದೆ.
ಕೆಲವು ಮೂಲಗಳ ಪ್ರಕಾರ ಸೂಪರ್ ಮಚ್ಚಿ ಚಿತ್ರವನ್ನ ನೇರವಾಗಿ ಒಟಿಟಿ ಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ ಎನ್ನಲಾಗ್ತಿದೆ. 2019ರ ಅಕ್ಟೋಬರ್ ತಿಂಗಳಲ್ಲೇ ಸೂಪರ್ ಮಚ್ಚಿ ಚಿತ್ರ ಆರಂಭವಾಗಿತ್ತು. ಆದ್ರೆ ಕಾರಣಾಂತರಗಳಿಂದ ಸೈಲೆಂಟ್ ಆಗಿದ್ದ ಸಿನಿಮಾ ಇದೀಗ ಬಿಡುಗಡೆಗೆ ರೆಡಿಯಾಗಿದೆ.
ಸೂಪರ್ ಮಚ್ಚಿ ಸಿನಿಮಾ ರಚಿತಾ ಸಿನಿ ಬದುಕಿನಲ್ಲಿ ಸಾಕಷ್ಟು ಮಹತ್ವದ ಸಿನಿಮಾವಾಗಿದೆ. ಕನ್ನಡದಲ್ಲಿ ಸೈ ಎನಿಸಿಕೊಂಡಿರೋ ರಚ್ಚು ಪರಭಾಷೆಗೆ ಕಾಲಿಟ್ಟಿರುವುದರಿಂದ ಈ ಚಿತ್ರದ ಗೆಲುವು ಸಾಕಷ್ಟು ಮಹತ್ವದಾಗಿದೆ. ಸೂಪರ್ ಮಚ್ಚಿ ಚಿತ್ರವನ್ನ ಅಭಿಮಾನಿಗಳು ಯಾವ ರೀತಿ ಸ್ವೀಕರಿಸ್ತಾರೆ ಅನ್ನೋ ಕುತೂಹಲ ಶುರುವಾಗಿದೆ.




