ಚಿಕ್ಕಮಗಳೂರು

ಸರ್ಕಲ್ ಇನ್ಸ್​ಪೆಕ್ಟರ್ ವಿರುದ್ಧ ಆಟೋ ಚಾಲಕರ ಪ್ರತಿಭಟನೆ

ಚಿಕ್ಕಮಗಳೂರು: ಆಟೋರಿಕ್ಷಾಗಳ ನಿಲುಗಡೆಗೆ ಸ್ಥಳ ಬದಲಾಯಿಸುವಂತೆ ವೃತ್ತ ನಿರೀಕ್ಷಕರೋರ್ವರು ತಾಕೀತು ಮಾಡಿದ್ದರಿಂದ ಆಟೋ ಚಾಲಕರು ಗ್ರಾಪಂ ಕಚೇರಿ ಎದುರು ಆಟೋಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಳಸ ತಾಲೂಕಿನ ಕುದುರೇಮುಖ ವೃತ್ತ ನಿರೀಕ್ಷಕ ಸಿ ಎನ್ ರಮೇಶ್ ವಿರುದ್ಧ ಹಿರೇಬೈಲು ಇಡಕಣಿ ಗ್ರಾಪಂ ಕಚೇರಿ ಎದುರು ಆಟೋಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಕಿಡಿಕಾರಿದರು. ಕಳೆದ 25 ವರ್ಷಗಳಿಂದ ಆಟೋ ನಿಲುಗಡೆ ಮಾಡಲಾಗುತ್ತಿದೆ. ಆದರೆ ಈಗ ಇದ್ದಕ್ಕಿದ್ದಂತೆ ಸ್ಥಳ ಬದಲಾಯಿಸಿ, ಮುಖ್ಯ ರಸ್ತೆಯಲ್ಲಿ ನಿಲ್ಲಿಸುವಂತೆ ಸಿಪಿಐ ಸೂಚಿಸಿದ್ದಾರೆ. ಮುಖ್ಯರಸ್ತೆಯಲ್ಲಿ ನಿಲ್ಲಿಸುವುದರಿಂದ ಆಟೋಗಳು ಅಪಘಾತಕ್ಕೀಡಾಗುತ್ತಿವೆ. ಆದ್ದರಿಂದ ಆಟೋ ನಿಲ್ದಾಣದಲ್ಲೇ ಆಟೋ ನಿಲ್ಲಿಸಲು ಅವಕಾಶ ನೀಡಬೇಕು. ಅಲ್ಲಿಯವರೆಗೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಆಟೋ ಚಾಲಕರು ಎಚ್ಚರಿಕೆ ನೀಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button