Latestಇತರ ಕ್ರೀಡೆಕ್ರೀಡೆ

ಇತಿಹಾಸ ಬರೆದ ಅರ್ಚನಾ, ಮನಿಕಾ

ಹೊಸದಿಲ್ಲಿ: ಲಾಸ್ಕೊದಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್ ಕಂಟೆಂಡರ್ ಚಾಂಪಿಯನ್ಷಿಪ್ ನಲ್ಲಿ ಕರ್ನಾಟಕದ ಅರ್ಚನಾ ಕಾಮತ್ ಹಾಗೂ ದೇಶದ ನಂ.1 ಆಟಗಾರ್ತಿ ಮನಿಕಾ ಬಾತ್ರ ಡಬಲ್ ಪದಕ ಗೆದ್ದು ಇತಿಹಾಸ ಸೃಷ್ಟಿಸಿದರು.

ವನಿತೆಯರ ಡಬಲ್ಸ್ ನಲ್ಲಿ ಭಾರತದ ಜೋಡಿ ಎದುರಾಳಿ ಮೆಲೆನಾ ಡಿಯಾಸ್ ಮತ್ತು ಆಡ್ರಿನಾ ಡಿಯಾಸ್ ಜೋಡಿಯನ್ನು 12-3, 11-8, 12-10 ಅಂತರದಲ್ಲಿ ಮಣಿಸಿ ಚಿನ್ನ ಗೆದ್ದುಕೊಂಡಿತು.

ಇದಕ್ಕೂ ಮುನ್ನ ಮನಿಕಾ ಸಿಂಗಲ್ಸ್ ಸೆಮಿ ಫೈನಲ್ ನಲ್ಲಿ ಸೋತು ಕಂಚಿನ ಗೆದ್ದಿದ್ದರು. ಅದೇ ರೀತಿ ಅರ್ಚನಾ ಕಾಮತ್ ಸಹ ಆಟಗಾರ ಮನವ್ ಠಕ್ಕರ್ ಜತೆಗೂಡಿ ಮಿಶ್ರ ಡಬಲ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅರ್ಚನಾ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಗುರ್ಪುರದವರು.

Spread the love

Related Articles

Leave a Reply

Your email address will not be published. Required fields are marked *

Back to top button