ಉತ್ತರ ಕನ್ನಡಜಿಲ್ಲಾ ಸುದ್ದಿಮನರಂಜನೆಸಿನಿಮಾಸೆಲೆಬ್ರಿಟಿ

Vijayalakshmi: ಕಷ್ಟ ಕಾಲದಲ್ಲಿ ನೆರವಿಗೆ ನಿಂತ ಅಭಿಮಾನಿಗೆ ನೋವು ಕೊಟ್ಟ ನಟಿ ವಿಜಯಲಕ್ಷ್ಮಿ

ಕಾರವಾರ : ಆರ್ಥಿಕ ತೊಂದರೆಯಲ್ಲಿದ್ದ ನಟಿ ವಿಜಯಲಕ್ಷ್ಮಿ ಅವರ ನೋವಿಗೆ ಮರುಕ ವ್ಯಕ್ತಪಡಿಸಿದ ಅಭಿಮಾನಿಯೋರ್ವರು ಆಸ್ಪತ್ರೆಯ ಬಿಲ್ ಕಟ್ಟಿ ಊಳಿದುಕೊಳ್ಳಲು ಮನೆಯನ್ನೂ ಮಾಡಿಕೊಟ್ಟಿದ್ದರು. ಆದರೆ ನಟಿ ಮಾತ್ರ ಮೂರೇ ದಿನದಲ್ಲಿ ವಿವಿಧ ನೆಪ ಹೇಳಿ, ಮುನಿಸಿಕೊಂಡು ವಾಪಸ್ ಬೆಂಗಳೂರಿಗೆ ತೆರಳಿದ್ದಾರೆ.

ಇತ್ತೀಚೆಗೆ ವಿಜಯಲಕ್ಷ್ಮಿ ಫೇಸ್ ಬುಕ್ ಲೈವ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು,ನಾನು ಮತ್ತು ನಮ್ಮ ಕುಟುಂಬ ಆಸ್ಪತ್ರೆಯಲ್ಲಿದ್ದು, ನಮಗೆ ಉಳಿದುಕೊಳ್ಳಲು ಮನೆ ಇಲ್ಲ,ತುಂಬಾ ತೊಂದರೆಯಲ್ಲಿರುವುದಾಗಿ ಹೇಳಿ ಅಭಿಮಾನಿಗಳ ಬಳಿ ಸಹಾಯ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ರಾಜಕಾರಣಿ ಮತ್ತು ಸಮಾಜ ಸೇವಕ ತುಕಾರಾಮ ನಾಯ್ಕ ಹಾಗೂ ಅವರ ಮಗಳು ಆಸ್ಪತ್ರೆಯ ಬಿಲ್ ಕಟ್ಟಿದ್ದಾರೆ. ಅಷ್ಟಲ್ಲದೇ ವಿಜಯಲಕ್ಷ್ಮಿ ಕುಟುಂಬವನ್ನು ತಮ್ಮದೇ ಖರ್ಚಿನಲ್ಲಿ ಬೆಂಗಳೂರಿನಿಂದ ಹೊನ್ನಾವರಕ್ಕೆ ಕಾರಿನಲ್ಲಿ ಕರೆ ತಂದು ಕರ್ಕಿಯಲ್ಲಿ ಮನೆ ನೀಡಿ ಆಶ್ರಯ ಒದಗಿಸಿದ್ದರು.

ಅಲ್ಲದೇ ಒಂದು ವರ್ಷದ ಬಾಡಿಗೆಯನ್ನೂ ತಾವೇ ತುಂಬುವುದಾಗಿಯೂ ತಿಳಿಸಿ ಉಳಿಯುವುದಕ್ಕೆ ಬೆಡ್, ಅಡುಗೆಗೆ ವ್ಯವಸ್ಥೆ ಕೂಡ ಕಲ್ಪಿಸಿ ಕೊಟ್ಟಿದ್ದರು. ಎರಡು ದಿನ ಅಡುಗೆ ಮಾಡಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ತಾವೇ ಊಟವನ್ನೂ ಪೂರೈಸಿದ್ದರು. ಆದರೆ ನಟಿ ಮಾತ್ರ ಎರಡೇ ದಿನದಲ್ಲಿ ಮನೆಯಲ್ಲಿ ಜಿರಲೆ, ಹಲ್ಲಿ ಬರುತ್ತದೆ ಎಂದೆಲ್ಲಾ ನೆಪಗಳನ್ನು ಹೇಳಿ ಮುನಿಸಿಕೊಂಡು ಇಂದು ಬೆಂಗಳೂರಿಗೆ ತೆರಳಿದ್ದಾರೆ.

ವಿಜಯಲಕ್ಷ್ಮಿ ಅವರ ಊಟ ಸೇರಿದಂತೆ ಇತರೆ ಖರ್ಚುವೆಚ್ಚ ಎಲ್ಲವನ್ನೂ ನೋಡಿಕೊಂಡಿದ್ದ ತುಕಾರಾಮ ಆರು ದಿನಗಳಿಂದ ಅವರನ್ನು ಸಹಿಸಿಕೊಂಡು ಬಂದಿದ್ದಾರೆ. ಆದರೆ ಮಾನವೀಯತೆ ನೆಲೆಯಲ್ಲಿ ಸಹಾಯ ಮಾಡಿದರೂ ಮನೆ ಸರಿ ಇಲ್ಲ ಎಂದು ಆಶ್ರಯ ಕೊಟ್ಟವರ ವಿರುದ್ಧವೇ ಅವರು ಮಾತನಾಡುತ್ತಿದ್ದರು. ಇದು ನಮಗೆ ತೀವ್ರ ಬೇಸರ ತರಿಸಿದೆ ಎಂದು ತುಕಾರಾಮ ನಾಯ್ಕ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button