ಡ್ಲಗ್ಸ್ ವಿಚಾರದಲ್ಲಿ ಟಿಆರ್ಪಿ ಗೋಸ್ಕರ ಸಿನೆಮಾದವರನ್ನು ಬಲಿಪಶು ಮಾಡೋದನ್ನು ನಾನು ಒಪ್ಪೋದಿಲ್ಲ: ನಟ ಚೇತನ್

ಬಾಗಲಕೋಟೆ: ಡ್ರಗ್ಸ್ ಅನ್ನೋದು ಹೈಎಂಡ್ ಡ್ರಗ್ಸ್ ಎಂಬ ಸಂಶಯವಿದೆ.ಅದೊಂದು ಸಮಸ್ಯೆಯಿದೆ ಅನ್ನೋದು ಎಷ್ಟೋ ಮೂಲಗಳು ಹೇಳುತ್ತಿವೆ. ಡ್ರಗ್ಸ್ ಬರೀ ಸಿನೆಮಾ ರಂಗಕ್ಕೆ ಸೀಮಿತ ಮಾಡೋದು ಸರಿಯಲ್ಲ. ಸಿನೆಮಾ ರಂಗದಲ್ಲಿ ಕೆಲ ಮಹಿಳೆಯರಿಗೆ ಸಿಮೀತ ಮಾಡಿದ್ರೆ ಅದು ಟಿಆರ್ಪಿ ಸೆನ್ಸೇಷನಲಿಸಂ ಎಂದು ಕಾಣುತ್ತೆ ಎಂದು ನಟ ಚೇತನ್ ಹೇಳಿದರು.
ಬಾದಾಮಿ ಪಟ್ಟಣದಲ್ಲಿ ಅಂಬಾ ಆಶ್ರಮದ ದಯಾ ಭಾರತಿ ಜಾಗ ತೆರವು ವಿರೋಧಿಸಿ, ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಡ್ರಗ್ಸ್ ವಿಚಾರದಲ್ಲಿ ಸಮಸ್ಯೆಯನ್ನು ಬಗೆಹರಿಸುವ ಮನಸ್ಥಿತಿ ಎದ್ದು ನನಗೆ ಕಾಣುತ್ತಿಲ್ಲ. ಅದಾನಿ ಪೋರ್ಟ್ ನಲ್ಲಿ ೩ಸಾವಿರ ಕೆ ಜಿ ಹೆರಾಯಿನ್ 21 ಸಾವಿರ ಕೋಟಿಯಷ್ಟು ಪತ್ತೆಯಾಗಿದೆ. ದೊಡ್ಡಮಟ್ಟದಲ್ಲಿ ಅದಾನಿ ಪೋರ್ಟ್ ನಲ್ಲಿ ಹೆರೋಯಿನ್, ಡ್ರಗ್ಸ್ ಬಂದಿದೆ ಎಂದ್ರೆ ಅದರ ಬಗ್ಗೆ ಜಾಸ್ತಿ ಚರ್ಚೆ ಈ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಟಿಆರ್ ಪಿ ಗೊಸ್ಕರ ಸಿನೆಮಾದವರನ್ನು ಬಲಿಪಶು ಮಾಡೋದನ್ನು ನಾನು ಒಪ್ಪುವುದಿಲ್ಲ. ಡ್ರಗ್ಸ್ ಸಂಪೂರ್ಣವಾಗಿ ತೊಡೆದು ಹಾಕಬೇಕು.ಇವರು ತಪ್ಪು, ಅವರ ತಪ್ಪು ಅನ್ನೋದಕ್ಕಿಂತ ಅದು ಸಮಾಜದ ಸಮಸ್ಯೆ. ಈ ಬಗ್ಗೆ ಜಾಗೃತಿ ಮೂಡಿಸಿ, ಆರೋಗ್ಯಕರ ಚರ್ಚೆ ನಡೆಯಬೇಕು. ಸಿನೆಮಾ ರಂಗದ ಒಬ್ಬರೋ ಇಬ್ಬರೋ ನಟ, ನಟಿಯರ ತಪ್ಪು ಹುಡುಕುತ್ತೇವೆ ಎಂದ್ರೆ ಸಮಸ್ಯೆ ಬಗೆಹರಿಯೋದಿಲ್ಲ ಎಂದರು
ಪ್ರಧಾನಿ ನರೇಂದ್ರ ಮೋದಿ ಅಮೇರಿಕಾ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋದಿ ಅಮೇರಿಕಾದ ಜೊತೆ ಮಾತನಾಡಿದಾಗಲೆಲ್ಲಾ ಅಮೇರಿಕಾದ ಬರಾಕ್ ಒಬಾಮಾ ಆಗಿರಬಹುದು, ಟ್ರಂಪ್ ಆಗಿರಬಹುದು. ಈಗ ಬೈಡನ್ ಆಗಿರಬಹುದು. ಮೋದಿ ಅಮೇರಿಕಾವನ್ನು ಹಾಡಿಹೊಗಳಿ ಅವರ ಜೊತೆ ನಮ್ಮನ್ನು ಗುಲಾಮರನ್ನಾಗಿ ಬಿಂಬಿಸಲು ಶುರು ಮಾಡಿದ್ದಾರೆ. ಅಮೇರಿಕಾ ಏನೇನು ಅನ್ಯಾಯ ಮಾಡಿದೆ ಅನ್ನೋದು ನಾವು ನೋಡ್ಕೊಂಡು ಬಂದಿದ್ದೀವಿ. 20, 21ನೇ ಶತಮಾನದಲ್ಲಿ ಅಮೇರಿಕಾ ಯುದ್ಧ ಮಾಡಿ ಲಕ್ಷಾಂತರ ಜನರನ್ನು ಕೊಂದಿದೆ. ಇದನ್ನು ಮೋದಿ ಪ್ರಶ್ನೆ ಮಾಡೋದನ್ನು ಬಿಟ್ಟು ಬರಾಕ್, ಟ್ರಂಪ್ ಅಂದುಕೊಂಡು ಬರೀ ಸ್ನೇಹ ಬೆಳಸಿಕೊಳ್ಳದೇ. ಹೊರದೇಶ ನಮ್ಮ ದೇಶದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಬೇಕು. ನಾವು ಉತ್ತಮವಾಗಿ ಬದುಕಬೇಕು ಹೊರತು ಅವರು ಬಿಳಿಯವರು ಶ್ರೀಮಂತರೆಂದು ಅವರ ಕೆಳಗೆ ಕೆಲಸ ಮಾಡೋದು ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮೇರಿಕಾಕ್ಕೆ ನಾವೇನು ಕಡಿಮೆ ಎಂದು ತೋರಿಸಿಕೊಳ್ಳೋದು ಬೇಡ. ನಮ್ಮ ದೇಶವನ್ನು ಉತ್ತಮವಾಗಿ ಕಟ್ಪಿದರೆ ಅಮೇರಿಕಾವನ್ನು ಪ್ರಶ್ನೆ ಮಾಡುವ ಸಾಧ್ಯತೆಯಿದೆ. ಅಮೇರಿಕಾವನ್ನು ಯಾವಾಗ ಪ್ರಶ್ನೆ ಮಾಡೋದಕ್ಕೆ ಆಗೋಲ್ಲಂದರೆ .ನಮ್ಮ ದೇಶದಲ್ಲಿ ನಡೆಯುವ ಅನ್ಯಾಯ ಮೋದಿ ಮುಚ್ಚಿಹಾಕುತ್ತಿರುವಾಗ ಅಮೇರಿಕಾವನ್ನು ಪ್ರಶ್ನೆ ಮಾಡೋದಕ್ಕೆ ಆಗಲ್ಲ. ಮೋದಿಗೆ ಕಾಳಜಿಯಿದ್ದರೆ ನಮ್ಮ ದೇಶದ ತಳ ಸಮುದಾಯಗಳ ಬಗ್ಗೆ, ಖಾಸಗೀಕರಣ ಇವರೇ ಹೆಚ್ಚು ಮಾಡುತ್ತಿದ್ದಾರೆ.ಬೇಧ ಭಾವ ಹೆಚ್ಚು ಮಾಡುವ ಮನಸ್ಥಿತಿ ಮೋದಿಯಲ್ಲಿದೆ.ಪ್ರತಿ ವರ್ಷ 2ಕೋಟಿ ಉದ್ಯೋಗ ಕೊಡ್ತಿವಿ ಅಂದ್ರು ಕೊಡಲಿ. ಇವಾಗ 7ವರ್ಷದಲ್ಲಿ 14 ಕೋಟಿ ಉದ್ಯೋಗ ಕೊಡಬೇಕಿತ್ತು. ಅಮೇರಿಕಾ ಎಂಪೈರ್ ಅನ್ನು ಪ್ರಶ್ನೆ ಮಾಡಲಿ, ಅದನ್ನು ನಾವು ಒಪ್ಪೋದಕ್ಕೆ ಆಗೋಲ್ಲ ಎಂದರು.
ಇನ್ನು ಬಾದಾಮಿ ಪಟ್ಟಣದ ಆನಂದ್ ನಗರದಲ್ಲಿ ಅಂಬಾ ಆಶ್ರಮದ ದಯಾಭಾರತಿ ಮಾತಾಜಿ ಮಠದ ಜಾಗದ ಶೆಡ್ ನ್ನು ಪುರಸಭೆ ಅಧಿಕಾರಿಗಳು ತಮಗೆ ಸೇರಿದ್ದು ಎಂದು ತೆರವು ಮಾಡಿದ್ದರು. ಸಮಾಜಮುಖಿ ಕಾರ್ಯ ಮಾಡುತ್ತಿರುವ ದಯಾಭಾರತಿ ಮಾತಾಜಿಯವರಿಗೆ ಈ ಜಾಗವನ್ನು ಕೊಡುವಂತೆ ಕ್ಷೇತ್ರದ ಶಾಸಕ ಸಿದ್ಧರಾಮಯ್ಯ ಅವರಿಗೆ ಈ ಹಿಂದೆ ಭೇಟಿಯಾಗಿ ಮನವಿ ಕೊಟ್ಟಿದ್ದೀವಿ. ಪರಿಶೀಲನೆ ಮಾಡುವುದಾಗಿ ಹೇಳಿದ್ದರು.
ಇನ್ನು ಜಾಗ ಕೊಟ್ಟಿಲ್ಲ ಹೀಗಾಗಿ ಆತ ಜಾಗಕ್ಕೆ ಭೇಟಿ ನೀಡಿದ್ದೇನೆ. ನಾಳೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಕೊಡಲಿದ್ದೇವೆ.ಜಾಗ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ನಟ ಚೇತನ್ ಎಚ್ಚರಿಕೆ ನೀಡಿದರು.



