ಪುರುಷರೆ, ಒಣದ್ರಾಕ್ಷಿ ಸೇವಿಸಲು ಮರೆಯದಿರಿ

ಡ್ರೈಫ್ರೂಟ್ಸ್ ಗಳ ಪೈಕಿ ಒಣ ದ್ರಾಕ್ಷಿಯ ಪ್ರಯೋಜನಗಳು ಹಲವು. ಇದರ ಸೇವನೆಯಿಂದ ಶೀತದ ಸಮಸ್ಯೆಯಿಂದ ಹಿಡಿದು ಹಲವು ಮಾರಣಾಂತಿಕ ರೋಗಗಳ ತನಕ ರಕ್ಷಣೆ ಪಡೆದುಕೊಳ್ಳಬಹುದು. ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಒಣ ದ್ರಾಕ್ಷಿಯನ್ನು ಸ್ತನಪಾನ ಮಾಡುವ ಮಹಿಳೆಯರ ಹೊರತಾಗಿ ಉಳಿದೆಲ್ಲರೂ ಯಾವುದೇ ಭಯವಿಲ್ಲದೆ ಸೇವಿಸಬಹುದು. ನಿಯಮಿತವಾಗಿ ಒಣ ದ್ರಾಕ್ಷಿಯನ್ನು ಸೇರಿಸುವುದರಿಂದ ರಾತ್ರಿಯ ಕುರುಡುತನ ಹಾಗೂ ಕಣ್ಣಿನ ಪೊರೆಯ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.
ಒಣ ದ್ರಾಕ್ಷಿ ಸೇವನೆಯಿಂದ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಿ ಕೊಲೆಸ್ಟ್ರಾಲನ್ನು ಇಳಿಸಿಕೊಳ್ಳಬಹುದು. ಪುರುಷರಿಗೆ ಇದು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ಆಹಾರ ಎನ್ನಲಾಗಿದೆ. ರಾತ್ರಿ ಮಲಗುವ ಮುನ್ನ ಎಂಟರಿಂದ ಹತ್ತು ಒಣದ್ರಾಕ್ಷಿಗಳನ್ನು ಒಂದು ಲೋಟ ಹಾಲಿನೊಂದಿಗೆ ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಪುರುಷರ ಹಲವು ಸಮಸ್ಯೆಗಳು ದೂರವಾಗುತ್ತದೆ.
ಒಣ ದ್ರಾಕ್ಷಿಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಅದನ್ನು ಹಾಲಿಗೆ ಸೇರಿಸಿ ಸವಿಯಿರಿ ಇಲ್ಲವೇ ನೀರಿನಲ್ಲಿ ಬೆರೆಸಿ ತಿನ್ನಿ.




