Breaking Newsವಿದೇಶಸುದ್ದಿ

Joe Biden: ಸೈನಿಕರನ್ನು ಕೊಂದವರು ಎಲ್ಲೇ ಇದ್ದರೂ ಹುಡುಕಿ ಕೊಲ್ಲುತ್ತೇವೆ: ಜೋ ಬೈಡೆನ್

ವಾಷಿಂಗ್ಟನ್: ಅಫ್ಘಾನ್‌ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಬಳಿ 12 ಮಂದಿ ಅಮೆರಿಕನ್‌ ಸೈನಿಕರನ್ನು ಹತ್ಯೆಗೈದಿರುವ ಉಗ್ರರನ್ನು ಸುಮ್ಮನೆ ಬಿಡಲಾರೆವು. ನಾವು ಅವರನ್ನು ಬೇಟೆಯಾಡಿಯೇ ತೀರುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಶ್ವೇತಭವನದಲ್ಲಿ ಅವರು ಮಾತನಾಡಿ, ಹತ್ಯೆಯಾದ ಅಮೆರಿಕದ ಸೈನಿಕರು ನಮ್ಮ ಪಾಲಿಗೆ ಹೀರೋಗಳಾಗಿ ಹುತಾತ್ಮರಾಗಿದ್ದಾರೆ. ನಾವು ಭಯೋತ್ಪಾದಕರ ಕೃತ್ಯವನ್ನು ಕ್ಷಮಿಸುವುದಿಲ್ಲ, ನಾವು ಮರೆಯುವುದಿಲ್ಲ. ಪ್ರತೀಕಾರ ತೀರಿಸುತ್ತೇವೆ. ನೀವು ಎಲ್ಲೇ ಇದ್ದರೂ ಹುಡುಕಿ ಹುಡುಕಿ ಕೊಲ್ಲುತ್ತೇವೆ. ದಾಳಿಯನ್ನು ಮಾಡಿದವರಿಗೆ ಹಾಗೂ ಅಮೆರಿಕಕ್ಕೆ ಹಾನಿ ಮಾಡಲು ಬಯಸಿದ ಯಾರಿಗಾದರೂ ಇದು ತಿಳಿದಿರಲಿ ಎಂದು ಬೈಡನ್‌ ಖಡಕ್‌ ಎಚ್ಚರಿಕೆ ನೀಡಿದರು.

ಕಾಬೂಲ್‌ನಿಂದ ಸ್ಥಳಾಂತರಿಸುವ ಕಾರ್ಯಾಚರಣೆಯು ಆ.31ರವರೆಗೆ ಮುಂದುವರಿಯುತ್ತದೆ. ನಮ್ಮ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ. ಅಫ್ಘಾನಿನಲ್ಲಿರುವ ಸಾವಿರಾರು ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಅಮೆರಿಕ ಪೂರ್ಣಗೊಳಿಸುತ್ತದೆ ಎಂದು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button