ನಟಿಯೊಂದಿಗೆ ಡ್ಯಾನ್ಸ್ ಮಾಡಿ ಟ್ರೋಲ್ ಆದ ನಿರ್ದೇಶಕ ಆರ್ ಜಿವಿ

ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಏನೇ ಮಾಡಿದರೂ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತದೆ. ಮೊದಲು ಸಂವೇದನಾಶಿಲ ಚಿತ್ರಗಳಿಗೆ ಹೆಸರು ವಾಸಿಯಾಗಿದ್ದ ನಿರ್ದೇಶಕರು ಇತ್ತೀಚಿಗೆ ತಮ್ಮ ದುಷ್ಟ ಚಟುವಟಿಕೆಗಳಿಂದ ಹೆಸರು ವಾಸಿಯಾಗಿದ್ದಾರೆ.
ಇತ್ತೀಚೆಗೆ ಟಿವಿ ನಟಿಯೊಂದಿಗೆ ಅವರ ಹೊಸ ವಿಲಕ್ಷಣ ನೃತ್ಯ ವಿಡಿಯೋವೊಂದು ಹರಿದಾಡುತ್ತಿದೆ. ನಿರ್ದೇಶಕ ಆರ್ ಜಿವಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಹಿಂದಿ ಟಿವಿ ನಟಿ ಇನಾಯ ಸುಲ್ತಾನಾ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದ ಆರ್ ಜಿವಿ, ಆಕೆಯೊಂದಿಗೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದರು. ಮತ್ತು ಆಕೆಯ ಕಾಲಿಗೆ ಬಿದ್ದಿದ್ದಾರೆ. ಅಲ್ಲದೇ ನಟಿಯ ಕಡೆಗೆ ವಿಚಿತ್ರ ಸನ್ನೆಗಳನ್ನು ಮಾಡಿದ್ದು, ಇದು ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡಿದೆ. ಇದಕ್ಕೆ ಕೆಲವರು ಅವರಂತೆಯೇ ಜೀವನವನ್ನು ಎಂಜಾಯ್ ಮಾಡಬೇಕು ಎಂದು ಹೇಳಿದರೆ, ಕೆಲವರು ಈ ವಯಸ್ಸಿನಲ್ಲಿ ಅವರ ದುಷ್ಟ ಚಟುವಟಿಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.




