ಆರೋಗ್ಯಲೈಫ್ ಸ್ಟೈಲ್

ದಪ್ಪಗಾಗುವುದು ಈಗ ಸುಲಭ

ಪವಿತ್ರಾ ಶೆಟ್ಟಿ

ಸಣ್ಣಗಿರುವುವರು ದಪ್ಪಗಾಗಬೇಕೆಂದು ಹಲವು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅದಕ್ಕೆ ಔಷಧಾಲಯಗಳ ಮದ್ದು ಸೇವಿಸುವ ಬದಲು ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಸೇವಿಸುವ ಮೂಲಕ ನೀವು ದೇಹ ತೂಕ ಹೆಚ್ಚಿಸಿಕೊಳ್ಳಬಹುದು.

ಒಣದ್ರಾಕ್ಷಿಗಳನ್ನು ಹಿಂದಿನ ದಿನದ ರಾತ್ರಿಯೇ ನೆನೆಹಾಕಿ. 6 ರಿಂದ 8 ದ್ರಾಕ್ಷಿ ದಿನಕ್ಕೆ ಸಾಕು. ಮರುದಿನ ಬೆಳಗ್ಗೆದ್ದು ಇದನ್ನು ನೀರಿನೊಂದಿಗೆ ಸೇವಿಸಬೇಕು. ಕೇವಲ ಒಂದು ತಿಂಗಳಲ್ಲಿ ನಿಮ್ಮ ದೇಹ ತೂಕ ಹೆಚ್ಚುವುದು ನಿಮಗೇ ಸ್ಪಷ್ಟವಾಗುತ್ತದೆ.

ಪೀನಟ್ ಬಟರ್ ಅನ್ನು ಸೇವಿಸಿ. ಇದರಿಂದಲೂ ನೀವು ಶೀಘ್ರವಾಗಿ ದಪ್ಪಗಾಗುತ್ತೀರಿ. ಆಲೂಗಡ್ಡೆ ನಿಮಗಿಷ್ಟದ ತರಕಾರಿಯಾಗಿದ್ದರೆ ನಿತ್ಯ ಅದನ್ನು ಆಹಾರದ ರೂಪದಲ್ಲಿ ಸೇವಿಸಿ. ಕೆಲವೇ ದಿನಗಳಲ್ಲಿ ನೀವು ದಪ್ಪಗಾಗುತ್ತೀರಿ.

ಬನಾನಾ ಮಿಲ್ಕ್ ಶೇಕ್ ನಿತ್ಯ ತಯಾರಿಸಿ ಕುಡಿಯಿರಿ. ಅಥವಾ ಬಾಳೆಹಣ್ಣು ಹಾಗೂ ಹಾಲನ್ನು ಜೊತೆಯಾಗಿ ಸೇವಿಸಿ. ಇದರಿಂದಲೂ ದೇಹ ಸದೃಢವಾಗಿ ಆರೋಗ್ಯವಾಗಿ ಬೆಳೆಯುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button