Breaking NewsLatestಇತರ ಕ್ರೀಡೆಕ್ರೀಡೆ
ವಿನೇಶ್ ಫೊಗತ್ ತಾತ್ಕಾಲಿಕ ಅಮಾನತು

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್ ಅಶಿಸ್ತಿನಿಂದ ವರ್ತಿಸಿದ ಕುಸ್ತಿಪಟು ವಿನೇಶ್ ಫೊಗತ್ ಅವರನ್ನು ಭಾರತೀಯ ಕುಸ್ತಿ ಸಂಸ್ಥೆ ತಾತ್ಕಾಲಿಕವಾಗಿ ಅಮಾನತು ಮಾಡಿದೆ.
ಅದೇ ರೀತಿ ಕುಸ್ತಿ ಪಟು ಸೋನಂ ಮಲಿಕ್ ಗೂ ಕುಸ್ತಿ ಸಂಸ್ಥೆ ನೊಟೀಸು ಜಾರಿ ಮಾಡಿದೆ.
ಪಂದ್ಯದಲ್ಲಿ ಸೋತ ನಂತರ ವಿನೇಶ್ ಕ್ರೀಡಾಗ್ರಾಮದಲ್ಲಿ ಉಳಿದಿಲ್ಲ. ಅಲ್ಲದೆ ಭಾರತ ತಂಡಕ್ಕೆ ಪ್ರಾಯೋಜಕತ್ವ ನೀಡಿದ್ದ ಕಂಪೆನಿಯ ಲೋಗೋ ಧರಿಸದೆ ತಮಗೆ ವೈಯಕ್ತಿಕ ಪ್ರಾಯೋಜಕತ್ವ ನೀಡಿದ್ದ ಕಂಪೆನಿಯ ಲಾಂಛನ ಧರಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಆಗಸ್ಟ್ 16ರ ಒಳಗಾಗಿ ಉತ್ತರ ನೀಡುವಂತೆ ಕುಸ್ತಿ ಸಂಸ್ಥೆ ಆದೇಶಿಸಿದೆ.
“ಒಬ್ಬ ಕ್ರೀಡಾಪಟುವಿಗೆ ಹಲವಾರು ಕೋಚ್ ಗಳು ಮತ್ತು ಸಹಾಯಕ ಸಿಬ್ಬಂದಿ ಇರುವಾಗ ನಾಲ್ವರು ಕುಸ್ತಿಪಟುಗಳಿಗೆ ಒಬ್ಬ ಫಿಸಿಯೋಥೆರಪಿಸ್ಟ್ ರನ್ನು ನಿಯೋಜಿಸುವುದು ಅಪರಾಧ” ಎಂದು ವಿನೇಶ್ ಟ್ವಿಟರ್ ನಲ್ಲಿ ಹೇಳಿಕೊಂಡಿರುವುದು ಕೂಡ ಕುಸ್ತಿ ಸಂಸ್ಥೆಯನ್ನು ಕೆರಳುವಂತೆ ಮಾಡಿದೆ.
