Breaking NewsLatestರಾಜಕೀಯರಾಷ್ಟ್ರೀಯ

ಬಿಜೆಪಿ, ಕಾಂಗ್ರೆಸ್ ಸೇರಿ 9 ಪಕ್ಷಗಳಿಗೆ ದಂಡ; ಸುಪ್ರೀಂ ಕೋರ್ಟ್ ಮಹತ್ವದ ನಡೆ

ಮತ್ತೆ ಮತ್ತೆ ಸೂಚಿಸಿದರೂ ರಾಜಕೀಯ ಪಕ್ಷಗಳು ಆಳವಾದ ನಿದ್ದೆಯಿಂದ ಎಚ್ಚರಗೊಳ್ಳಲು ತಯಾರಾಗಲೇ ಇಲ್ಲ ಎಂದು ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ನವದೆಹಲಿ: ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ತಮ್ಮ ಚುನಾವಣಾ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ಬಹಿರಂಗಪಡಿಸದ 9 ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ.

ರಾಜಕಾರಣವನ್ನು ಅಪರಾಧ ಮುಕ್ತಗೊಳಿಸುವ ನಿಟ್ಟಿನ ಮಹತ್ವದ ಹೆಜ್ಜೆಯಾಗಿ ಸುಪ್ರಿಂ ಕೋರ್ಟ್ ಈ ಕ್ರಮ ಕೈಗೊಂಡಿದೆ.

ಕಳೆದ ವರ್ಷದ ಬಿಹಾರ ಚುನಾವಣೆಗೆ ಸಂಬಂಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತಿತರ 5 ಪಕ್ಷಗಳಿಗೆ ತಲಾ ಒಂದು ಲಕ್ಷ, ಸಿಪಿಎಂ ಮತ್ತು ಎನ್​ಸಿಪಿಗೆ 5 ಲಕ್ಷ ದಂಡ ವಿಧಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಮತ್ತೆ ಮತ್ತೆ ಸೂಚಿಸಿದರೂ ರಾಜಕೀಯ ಪಕ್ಷಗಳು ಆಳವಾದ ನಿದ್ದೆಯಿಂದ ಎಚ್ಚರಗೊಳ್ಳಲು ತಯಾರಾಗಾಲೇ ಇಲ್ಲ ಎಂದು ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ರಾಜಕಾರಣಿಗಳು ಶೀಘ್ರದಲ್ಲೇ ಎಚ್ಚೆತ್ತುಕೊಳ್ಳುತ್ತಾರೆ ಮತ್ತು ರಾಜಕೀಯ ಅಪರಾಧೀಕರಣದ ದುಷ್ಕೃತ್ಯ ಹೊರಹಾಕಲು ದೊಡ್ಡ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಾರೆ ಎಂಬ ಆಶಯವನ್ನು ಕೋರ್ಟ್ ವ್ಯಕ್ತಪಡಿಸಿದೆ.

ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ಘೋಷಿಸುವಲ್ಲಿ ರಾಜಕೀಯ ಪಕ್ಷಗಳು ಎಚ್ಚರವಹಿಸಬೇಕೆಂದೂ ಮಾಹಿತಿಗಳನ್ನು ತಮ್ಮ ವೆಬ್​ಸೈಟ್​ಗಳಲ್ಲಿ ಪ್ರಕಟಿಸಬೇಕೆಂದೂ ಸುಪ್ರೀಂ ಕೋರ್ಟ್ ಎಚ್ಚರಿಕೆ ಕೊಟ್ಟಿದೆ. ಮತದಾರರಿಗೆ ಮಾಹಿತಿಗಳು ಸುಲಭವಾಗಿ ಲಭ್ಯವಿರುವಂತೆ ಮೊಬೈಲ್ ಆ್ಯಪ್ ಸಿದ್ಧಪಡಿಸಲು ಚುನಾವಣಾ ಆಯೋಗಕ್ಕೂ ಸೂಚಿಸಲಾಗಿದೆ.

ಇದನ್ನೂ ಓದಿ: ಅಭ್ಯರ್ಥಿ ಆಯ್ಕೆಯಾದ 48 ಗಂಟೆಗಳೊಳಗೆ ಅಪರಾಧ ದಾಖಲೆ ಬಹಿರಂಗ; ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ಅಭ್ಯರ್ಥಿಯನ್ನು ಆಯ್ಕೆ ಮಾಡಿದ 48 ಗಂಟೆಗಳೊಳಗೆ ಆಯಾ ರಾಜಕೀಯ ಪಕ್ಷಗಳು ಅಭ್ಯರ್ಥಿಯ ಕ್ರಿಮಿನಲ್ ಪ್ರಕರಣಗಳ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು ಆದೇಶಿಸಿರುವ ಸುಪ್ರೀಂ ಕೋರ್ಟ್, ಈ ಹಿಂದಿನ ಆದೇಶ ಪಾಲಿಸದ ರಾಜಕೀಯ ಪಕ್ಷಗಳಿಗೆ ದಂಡದ ಮೂಲಕ ಚುರುಕು ಮುಟ್ಟಿಸಿದೆ.

ತಮ್ಮ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸದ ರಾಜಕೀಯ ಪಕ್ಷಗಳ ಚಿಹ್ನೆ ರದ್ದುಗೊಳಿಸಬೇಕೆಂದು ಕೋರಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ವೇಳೆ ಸುಪ್ರಿಂ ಕೋರ್ಟ್​ ಈ ಮಹತ್ವದ ಆದೇಶ ಪ್ರಕಟಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button