Breaking NewsLatestರಾಜಕೀಯರಾಜ್ಯ

Bommai Cabinet: ಪ್ರಮಾಣ ವಚನ ಸ್ವೀಕರಿಸಿದ 29 ನೂತನ ಸಚಿವರು

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದ ನೂತನ ಸಚಿವರಾಗಿ 29 ಶಾಸಕರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಮಾಡಿದರು. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಪ್ರಮಾಣವಚನ ಬೋಧಿಸಿದರು. ಮೊದಲಿಗೆ ಗೋವಿಂದ ಕಾರಜೋಳ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು

ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲೇ ಇದ್ದು ಲಾಬಿ ನಡೆಸಿದ್ದ ಶಶಿಕಲಾ ಜೊಲ್ಲೆ ಸ್ಥಾನ ಖಚಿತವಾಗುತ್ತಿದ್ದಂತೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು. ಅವರು ಬೆಂಗಳೂರಿಗೆ ಬರಬೇಕಾದ ವಿಮಾನ ಅರ್ಧ ಗಂಟೆ ವಿಳಂಬವಾದ ಕಾರಣ, ಏರ್​ಪೋರ್ಟ್​ನಿಂದ ಅವರು ಝೀರೋ ಟ್ರಾಫಿಕ್​ನಲ್ಲಿ ರಾಜಭವನಕ್ಕೆ ಆಗಮಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದ ಸಮಾರಂಭಕ್ಕೆ ಮಾಜಿ ಸಿಎಂ ಬಿ ಎಸ್​ ವೈ ಯಡಿಯೂರಪ್ಪ ಕೂಡ ಆಗಮಿಸಿದ್ದರು.

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು:
1. ಅರಗ ಜ್ಞಾನೇಂದ್ರ-ತೀರ್ಥಹಳ್ಳಿ
2. ಹಾಲಪ್ಪ ಆಚಾರ್-ಯಲಬುರ್ಗ
3. ಶಂಕರ ಪಾಟೀಲ್ ಮುನೇನಕೊಪ್ಪ-ನವಲಗುಂದ
4. ಮುರುಗೇಶ್ ನಿರಾಣಿ-ಬೀಳಗಿ
5. ಶ್ರೀರಾಮುಲು-ಮೊಳಕಾಲ್ಮೂರು
6. ಶಶಿಕಲಾ ಜೊಲ್ಲೆ-ನಿಪ್ಪಾಣಿ
7. ಆರ್.ಅಶೋಕ್-ಪದ್ಮನಾಭನಗರ
8. ಬೈರತಿ ಬಸವರಾಜು-ಕೆ.ಆರ್.ಪುರಂ
9. ಎಸ್.ಟಿ.ಸೋಮಶೇಖರ್-ಯಶವಂತಪುರ
10. ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ
11. ಎಂ.ಟಿ.ಬಿ.ನಾಗರಾಜ್-ಮೇಲ್ಮನೆ
12. ಕೆ.ಸಿ.ನಾರಾಯಣಗೌಡ-ಕೆ.ಆರ್.ಪೇಟೆ
13. ಬಿ.ಸಿ.ಪಾಟೀಲ್-ಹಿರೇಕೆರೂರು
14. ಮುನಿರತ್ನ-ಆರ್.ಆರ್.ನಗರ
15. ವಿ.ಸೋಮಣ್ಣ-ಗೋವಿಂದರಾಜನಗರ
16. ಉಮೇಶ್ ಕತ್ತಿ-ಹುಕ್ಕೇರಿ
17. ಪ್ರಭುಚವ್ಹಾಣ್-ಔರಾದ್
18. ಕೆ.ಗೋಪಾಲಯ್ಯ-ಮಹಾಲಕ್ಷ್ಮಿಲೇಔಟ್
19. ಅಶ್ವತ್ಥನಾರಾಯಣ-ಮಲ್ಲೇಶ್ವರಂ
20. ಶಿವರಾಂ ಹೆಬ್ಬಾರ್-ಯಲ್ಲಾಪುರ
21. ಎಸ್.ಅಂಗಾರ- ಸುಳ್ಯ
22. ಕೋಟಾ ಶ್ರೀನಿವಾಸಪೂಜಾರಿ -ಮೇಲ್ಮನೆ
23. ಆನಂದ್‍ಸಿಂಗ್-ಹೊಸಪೇಟೆ
24. ಬಿ.ಸಿ.ನಾಗೇಶ್- ತಿಪಟೂರು
25. ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ
26. ಸುನೀಲ್‍ ಕುಮಾರ್-ಕಾರ್ಕಳ
27. ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ
28. ಗೋವಿಂದ ಕಾರಜೋಳ-ಮುಧೋಳ
29. ಸಿ.ಸಿ.ಪಾಟೀಲ್-ನರಗುಂದ

Spread the love

Related Articles

Leave a Reply

Your email address will not be published. Required fields are marked *

Back to top button